Featured StoryBidar

ರಬಿ ಬೆಳೆಗೆ ಕಾಡು ಹಂದಿಗಳ ಕಾಟ | ವಿಭಿನ್ನ ರೀತಿಯಲ್ಲಿ ಬೆಳೆ ಸಂರಕ್ಷಣೆಗೆ ಮುಂದಾದ ರೈತರು

ಬೀದರ್ : ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಕಾಡು ಹಂದಿಗಳ ಕಾಟ ವಿಪರೀತವಾಗಿದ್ದು ರೈತರು ಬೆಳೆದ ಕುಸುಬೆ, ಜೋಳ ,ಕಡಲೆ ಬೆಳೆಗಳ ರಕ್ಷಣೆಗೆ ಸೀರೆಗಳ ಬೇಲಿ, ಧ್ವನಿ ವರ್ಧಕಗಳ ಮೊರೆ ಹೋಗುತ್ತಿದ್ದಾರೆ.

ಔರಾದ ತಾಲ್ಲೂಕಿನ ಕರಂಜಿ ,ರಾಯಪಲ್ಲಿ,ನಾರಾಯಣಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಡಲೆ , ಕುಸುಬೆ,ಜೋಳ ಬೆಳೆದ ರೈತರು ಕಾಡು ಹಂದಿಗಳಿಂದ ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ’ಹೊಲದ ಸುತ್ತಲೂ ಸೀರೆಗಳನ್ನು ಸುತ್ತಲಾಗುತ್ತಿದ್ದು, ರಾತ್ರಿ ಸಮಯದಲ್ಲಿ ಬೀಸುವ ಗಾಳಿಗೆ ಸೀರೆಯಿಂದ ಹೊರಬರುವ ಶಬ್ದದಿಂದ ಕಾಡು ಪ್ರಾಣಿಗಳು ಓಡಿ ಹೋಗುತ್ತವೆ ಎಂಬ ನಂಬಿಕೆ ನಮ್ಮದು’ ಎಂದು ರೈತ ರಾಹುಲ್ ತಿಳಿಸುತ್ತಾರೆ.

‘ಕುಸುಬೆ, ಕಡಲೆ ಹಾಗೂ ಜೋಳ ಬೆಳೆದ ರೈತರು ಕಾಡು ಹಂದಿಯ ಹಾವಳಿಯಿಂದ ರಕ್ಷಿಸಿಕೊಳ್ಳಲು ಹಲವಾರು ಬಗೆಯ ಉಪಾಯ ಮಾಡುತ್ತಿದ್ದಾರೆ. ಆದರೂ ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ಉಳಿಸಿಕೊಳ್ಳಲು ಕಷ್ಟವಾಗುತ್ತಿದೆ’ ಎನ್ನುವುದು ರೈತರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ’ವಿದ್ಯಾವಂತ ಯುವಕರು ಕೃಷಿಯಲ್ಲಿ ತಮ್ಮನ್ನು ತಾವು ತೋಡಗಿಸಿಕೊಳ್ಳುತ್ತಿರುವುದರಿಂದ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೋಳ್ಳುತ್ತಿದ್ದಾರೆ.
’ಬೆಳೆ ಬೆಳೆದು ರಾಶಿ ಮಾಡುವವರೆಗೆ ಬೆಳೆಗಳನ್ನು ಪ್ರತಿ ದಿನ ಕಾಯುವುದು ಕಷ್ಟದ ಕೆಲಸವಾಗಿದೆ. ಹೀಗಾಗಿ ರೈತರು ಹೊಲದ ಸುತ್ತ ಸೀರೆ ಬೇಲಿ ಹಾಕುವುದು, ಗೊಂಬೆಗಳನ್ನು ಕಟ್ಟುವುದು, ಗಂಟೆ ಶಬ್ದ ಸೇರಿದಂತೆ ಇನ್ನಿತರ ತಂತ್ರಜ್ಞಾನಗಳ ಬಳಕೆ ರೈತರು ಮಾಡುತ್ತಿದ್ದಾರೆ’ ಎಂದು ರೈತ ರಾಜಕುಮಾರ್ ತಿಳಿಸುತ್ತಾರೆ.

ಹೊಲಕ್ಕೆ ಸೀರೆಯಿಂದ ಬೇಲಿ ಹಾಕುವುದರಿಂದ ಕಾಡು ಪ್ರಾಣಿಗಳು ಹೊಲಕ್ಕೆ ನುಗ್ಗಲು ಹಿಂದೇಟು ಹಾಕುತ್ತವೆ. ಇದರಿಂದ ಬೆಳೆಗಳನ್ನು ರಕ್ಷಿಸಬಹುದು – ಮಾರುತಿ, ರೈತ

ಹನಮಂತ ದೇಶಮುಖ
THG ಬೀದರ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button