Featured StoryState News

ಬೀದರ್ ಜನತೆಗೆ ಬಿಗ್ ಶಾಕ್ | ಬೀದರ್ –ಬೆಂಗಳೂರು ವಿಮಾನ ಹಾರಾಟ ಬಂದ್

ಬೀದರ್ | ಜಿಲ್ಲೆಯಿಂದ ರಾಜ್ಯ ಹಾಗೂ ದೇಶದ ವಿವಿಧ ಮೂಲೆಗಳಿಗೆ ವಿಮಾನ ಹಾರಾಟ ಮಾಡಬೇಕು ಎಂದು ಜಿಲ್ಲೆಯ ಜನರು ಕನಸನ್ನ ಕಂಡಿದ್ದರೂ. ಇದಕ್ಕಾಗಿ ಹತ್ತಾರು ಹೋರಾಟಗಳನ್ನ ಸಹ ಮಾಡಿದ್ದರು.
ಜಿಲ್ಲೆಯ ಜನರ ಹೋರಾಟ ಕ್ಕೆ ಮಣಿದ ಕೇಂದ್ರ ಸರಕಾರ 2020 ಪೆಬ್ರುವರಿ 7 ರಂದು ಬೀದರ್ನಿಂದ ಬೆಂಗಳೂರಿಗೆ 72 ಸೀಟ್ನ ಟ್ರೋಜೆಟ್ ವಿಮಾನದ ಹಾರಾಟ ಆರಂಭಿಸಿತು. ಆದರೆ, ಪ್ರಯಾಣಿಕರ ಕೊರತೆ, ಆರ್ಥಿಕ ನಷ್ಟದಿಂದಾಗಿ ಟ್ರೂಜೇಟ್ ವಿಮಾನ ಕೆಲವು ತಿಂಗಳಲ್ಲಿಯೇ ತನ್ನ ಹಾರಾಟವನ್ನ ನಿಲ್ಲಿಸಿತು.

ಇದಾದ ಬಳಿಕ ಒಂದು ವರ್ಷಗಳ ಕಾಲ ವಿಮಾನ ಹಾರಾಡಲೇ ಇಲ್ಲ. ಪ್ರಯಾಣಿಕರು ಹೈದ್ರಾಬಾದ್ಗೆ ಹೋಗಿ ಅಲ್ಲಿಂದ ವಿಮಾನದ ಮೂಲಕ ಬೆಂಗಳೂರು ಸೇರಿ ಇತರೆ ಬೇರೆ ಬೇರೆ ರಾಜ್ಯಗಳಿಗೆ ಪ್ರಯಾಣ ಮಾಡಿದರು. ಇದು ಪ್ರಯಾಣಿಕರಿಗೆ ಕಷ್ಟವಾಗ ತೊಡಗಿದಾಗ ಪ್ರಯಾಣಿಕರ ಒತ್ತಾಯದ ಮೇರೆಗೆ 2022 ಜೂನ್ 15 ರಂದು ಸ್ಟಾರ್ ಏರ್ ವಿಮಾನವು ತನ್ನ ಹಾರಾಟವನ್ನ ಆರಂಭಿಸಿತು. ಆದರೆ ಒಂದೂವರೆ ವರ್ಷದಲ್ಲಿಯೇ ಇದು ಕೂಡ ಆರ್ಥಿಕ ನಷ್ಟದಿಂದಾಗಿ ತನ್ನ ಸೇವೆಯನ್ನ ನಿಲ್ಲಿಸಿದೆ. ಹೀಗಾಗಿ ಇಲ್ಲಿ ಸುಸ್ಸಜ್ಜಿತ ಏರ್ ಪೋರ್ಟ್ ಇದ್ದರು ಕೂಡ ಜಿಲ್ಲೆಯ ಜನರಿಗೆ ವಿಮಾನ ಸೌಲಭ್ಯ ಸಿಗದಂತಾಗಿದೆ.
ಕಂಪನಿಗಳಿಗೆ ನಷ್ಟವಾಗುತ್ತಿರುವುದು ಯಾಕೆ ?
ಜಿಲ್ಲೆಯಲ್ಲಿನ ಹುಮನಾಬಾದ್ ಮತ್ತು ಬೀದರ ದಕ್ಷಿಣ ಮತಕ್ಷೇತ್ರದ ಕೆಲವೊಂದು ಪ್ರಯಾಣಿಕರಿಗೆ ಕಲಬುರಗಿ ಹತ್ತಿರವಾಗಿದ್ದು ,ಬೀದರ್ ಗೆ ಹೋಲಿಸಿದ್ದರೆ ರಾಜ್ಯದ ವಿವಿಧ ಭಾಗಕ್ಕೆ ಮತ್ತು ಬೇರೆ ರಾಜ್ಯಗಳಿಗೂ ಪ್ರಯಾಣದ ವ್ಯವಸ್ಥೆಯಿದೆ.ಅದೇ ರೀತಿ ಬೀದರ್ ಗೆ ಪ್ರತಿದಿನ ಕೇವಲ ಒಂದು ವಿಮಾನ ಮಾತ್ರ ಬೆಂಗಳೂರು – ಬೀದರ್ ನಡುವೆ ಸೇವೆ ನೀಡುತ್ತಿತ್ತು.ಹಾಗಾಗಿ ಪ್ರಯಾಣಿಕರು ಕಲಬುರಗಿ ಮತ್ತು ಹೈದರಾಬಾದ್ ಗೆ ಹೆಚ್ಚಿನ ಒತ್ತು ನೀಡಿದ್ದು ನಷ್ಟಕ್ಕೆ ಕಾರಣ ಅನ್ನಬಹುದು

ಇನ್ನು ಈ ವಿಚಾರ ಬಗ್ಗೆ ಬೀದರ್ ಜಿಲ್ಲಾಧಿಕಾರಿಯವರನ್ನ ಕೇಳಿದರೆ ‘ಪ್ರಯಾಣಿಕರ ಕೊರತೆಯಿಂದ ವಿಮಾನ ಹಾರಾಟ ನಿಲ್ಲಿಸಿದೆ. ಶೀಘ್ರದಲ್ಲಿಯೇ ಮತ್ತೊಂದು ವಿಮಾನ ಕಂಪನಿಯ ಜೊತೆಗೆ ಮಾತುಕತೆ ನಡೆಸಿ, ಮತ್ತೆ ವಿಮಾನ ಹಾರಿಸುವುದಾಗಿ ಜಿಲ್ಲಾಧಿಕಾರಿಗಳು ಹೇಳುತ್ತಿದ್ದಾರೆ. ಬೀದರ್ನಿಂದ ವಿಮಾನ ಹಾರಾಟ ಆರಂಭವಾಗಿ ಮೂರು ವರ್ಷದಲ್ಲಿಯೇ ಎರಡು ಕಂಪನಿಯವರು ವಿಮಾನ ಹಾರಾಟ ನಿಲ್ಲಿಸಿವೆ. ಇನ್ನು ಮುಂದೆ ಬೀದರ್ನಿಂದ ಬೆಂಗಳೂರಿಗೆ ವಿಮಾನ ಹಾರಾಟ ನಡೆಸುವುದು ಅನುಮಾನವಾಗಿದ್ದು, ಬೀದರ್ ವಿಮಾನ ನಿಲ್ದಾಣ ಮುಚ್ಚುವ ಎಲ್ಲಾ ಲಕ್ಷಣಗಳು ಇಲ್ಲಿ ಗೋಚರಿಸುತ್ತಿವೆ.

ಹಣಮಂತ ದೇಶಮುಖ
ಜಿಲ್ಲಾ ವರದಿಗಾರರು ಬೀದರ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button