ಬೀದರ್: ಬಸವಕಲ್ಯಾಣ ತಾಲ್ಲೂಕಿನ ಧನ್ನೂರಾ (ಕೆ)
ಗ್ರಾಮದ ಜಮಾ ಮಸೀದಿ ಮೇಲೆ ಕೆಲವು ದುಷ್ಕರ್ಮಿಗಳು ಭಗವಾಧ್ವಜ ಹಾರಿಸಿದ್ದರು.ಆರೋಪದ ಮೇರೆಗೆ ಗ್ರಾಮದ ನಾಲ್ವರು ಯುವಕರನ್ನು ಪೊಲೀಸರು ಭಾನುವಾರ ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರನ್ನು ಗ್ರಾಮದ ವೀರೇಶ ಶಿವಕುಮಾರ ಸೂರ್ಯ (20), ಕಲ್ಯಾಣಿ ರಾಜಕುಮಾರ ಸೂರ್ಯ (20), ಸುಶೀಲ ಶಿವಕುಮಾರ ಬಿರಾದಾರ (19) ಹಾಗೂ ಅಭಿಷೇಕ್ ಚಂದ್ರಕಾಂತ (19) ಎಂದು ಗುರುತಿಸಲಾಗಿದೆ.
‘ಸೆ. 20ರಂದು ರಾತ್ರಿ ಧನ್ನೂರಾ ಗ್ರಾಮದ ನಾಲ್ಕು
ಜನ ಯುವಕರು ಮದ್ಯ ಕುಡಿದು, ಅದೇ ಗ್ರಾಮದ
ಹನುಮಾನ್ ದೇವಸ್ಥಾನದ ಮೇಲಿನ ಭಗವಾ ಧ್ವಜ
ತೆಗೆದು, ಜಾಮಾ ಮಸೀದಿ ಮೇಲೆ ಕಟ್ಟಿದ್ದಾರೆ. ಮರುದಿನ
ಮಸೀದಿಯ ಚಾಂದಸಾಬ್ ಸಲೀಂ ಸಾಬ್ ಪಠಾಣ
ಎಂಬವರು ಕೊಟ್ಟ ದೂರಿನ ಮೇರೆಗೆ ಬಸವಕಲ್ಯಾಣ
ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ 21ರಂದು
ಪ್ರಕರಣ ದಾಖಲಿಸಲಾಗಿತ್ತು. ತನಿಖೆ ನಡೆಸಿ, ನಾಲ್ವರನ್ನು
ಬಂಧಿಸಲಾಗಿದ್ದು, ಅಶಾಂತಿ ಉಂಟು ಮಾಡುವುದಕ್ಕಾಗಿಯೇ ದುಷ್ಕೃತ್ಯ ಎಸಗಿರುವುದಾಗಿ ನಾಲ್ವರು ತಪೊಪ್ಪಿಕೊಂಡಿದ್ದಾರೆ.
“ಗ್ರಾಮದಲ್ಲಿ ಶಾಂತಿ ಸಭೆ ನಡೆಸಲಾಗಿದೆ. ಶಾಂತಿ ಕಾಪಾಡಲು ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡಿರುವುದಾಗಿ ಬೀದರ್ ಎಸ್ಪಿ ಚನ್ನಬಸವಣ್ಣನವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.