ಬಿಹಾರ ಸ್ಟೋರಿ: ಮುರಿದ ಕಾಲಿಗೆ ಪ್ಲಾಸ್ಟರ್ ಬದಲು ಕಾರ್ಡ್ ಬೋರ್ಡ್ ಕಟ್ಟಿ ನಿರ್ಲಕ್ಷ್ಯ!

ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಒಂದು ದುಃಖಕರ ಸನ್ನಿವೇಶ ವರದಿಯಾಗಿದೆ.

ಮುರಿದ ಕಾಲಿಗೆ ಪ್ಲಾಸ್ಟರ್ ಬದಲಿಗೆ ಕಾರ್ಡ್‌ಬೋರ್ಡ್‌ನಿಂದ ಬ್ಯಾಂಡೇಜ್ ಮಾಡಲಾಗಿದೆ. ಮೋಟಾರ್‌ಸೈಕಲ್ ಅಪಘಾತದಲ್ಲಿ ಗಾಯಗೊಂಡಿದ್ದ ನಿತೀಶ್ ಕುಮಾರ್ ಅವರು ರಾಜ್ಯದ ಮಣಿಪುರ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ “ಚಿಕಿತ್ಸೆ” ಪಡೆದಿದ್ದಾರೆ ಎಂದು ಎನ್‌ಡಿಟಿವಿ ಗುರುವಾರ ವರದಿ ಮಾಡಿದೆ. 

ದ್ವಿಚಕ್ರವಾಹನದಿಂದ ಬಿದ್ದು ಕಾಲಿಗೆ ಗಾಯ ಮಾಡಿಕೊಂಡಿದ್ದ ಕುಮಾರ್ ಅವರನ್ನು ಮಣಿಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಸ್ಟ್ಯಾಂಡರ್ಡ್ ಪ್ಲಾಸ್ಟರ್ ಕ್ಯಾಸ್ಟ್ ಮಾಡುವ ಬದಲು, ಕುಮಾರ್ ಅವರ ಕಾಲಿಗೆ ರಟ್ಟಿನ ತುಂಡಿನಿಂದ ಬ್ಯಾಂಡೇಜ್ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 

ಇದರ ನಂತರ, ಕುಮಾರ್ ಅವರನ್ನು ಮುಜಾಫರ್‌ಪುರದ ಶ್ರೀ ಕೃಷ್ಣ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ವರ್ಗಾಯಿಸಲಾಯಿತು. ಐದು ದಿನಗಳ ಕಾಲ ದಾಖಲಾಗಿದ್ದರೂ, ತಾತ್ಕಾಲಿಕ ಸ್ಪ್ಲಿಂಟ್ ಅನ್ನು ಪ್ಲಾಸ್ಟರ್ ಕ್ಯಾಸ್ಟ್‌ನೊಂದಿಗೆ ಬದಲಾಯಿಸಲು ಯಾವುದೇ ವೈದ್ಯರು ಅವರನ್ನು ಭೇಟಿ ಮಾಡಲಿಲ್ಲ ಎಂದು ಅವರ ಕುಟುಂಬ ಆರೋಪಿಸಿದೆ ಎಂದು ಮಾಧ್ಯಮ ವರದಿ ತಿಳಿಸಿದೆ. 

Latest Indian news

Popular Stories