ವಾಹನಕ್ಕೆ ಡಿಕ್ಕಿಯಾಗಿ ಜಿಂಕೆ ಸಾವು

ವಾಹನವೊಂದು ಡಿಕ್ಕಿಯಾದ ಪರಿಣಾಮ ಜಿಂಕೆ ಸಾವಿಗೀಡಾಗಿರುವ ಘಟನೆ ಇಂದು ಬೆಳಗ್ಗೆ ಗುಡ್ಡೆಹೊಸೂರು ಸಮೀಪದ ಆನೆಕಾಡು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಕುಶಾಲನಗರದಿಂದ ಮಡಿಕೇರಿಯತ್ತ ಬರುತ್ತಿದ್ದ ಮಹೇಂದ್ರ ಎಕ್ಸ್ ವಿ ಕಾರು ಆನೆಕಾಡು ತಲುಪಿದಾಗ ಹೆದ್ದಾರಿ ಬದಿಯಲ್ಲಿದ್ದ ಅಂದಾಜು 11 ವರ್ಷ ಪ್ರಾಯದ ಜಿಂಕೆ ಅಡ್ಡದಾಟುತ್ತಿದ್ದಂತೆ ಕಾರು ಡಿಕ್ಕಿಯಾಗಿ ಜಿಂಕೆ ಸ್ಥಳದಲ್ಲಿಯೇ ಅಸು ನೀಗಿದೆ

Latest Indian news

Popular Stories