ಕೆಲವರು ಬಿಜೆಪಿ ಪಕ್ಷವನ್ನು ಹೈಜಾಕ್ ಮಾಡುತ್ತಿದ್ದಾರೆ: ಜಗದೀಶ ಶೆಟ್ಟರ್

ತಾಳಿಕೋಟೆ: ಬಿಜೆಪಿಯಲ್ಲಿ ನಾನು ಲಿಂಗಾಯತರ ಹಿರಿಯ ನಾಯಕನಾಗಿದ್ದೆ. ಬಿಜೆಪಿ ಪಕ್ಷ ಗೆದ್ದರೆ ದೊಡ್ಡ ಪ್ರಮಾಣದ ಅಧಿಕಾರಿ ಕೊಡಬೇಕಾಗುತ್ತದೆ ಎಂದು ಕೇಲವರು ಬಿಜೆಪಿ ಪಕ್ಷವನ್ನು ಸ್ವಾಧೀನ ಪಡೆದುಕೊಳ್ಳಲು ನನಗೆ ಟಿಕೇಟ್ ತಪ್ಪಿಸಿದರು. ನನ್ನ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದರಿಂದ ಆತ್ಮ ಗೌರವ ಉಳಿಸಿಕೊಳ್ಳಲು ನಾನು ಕಾಂಗ್ರೇಸ್ ಪಕ್ಷವನ್ನು ಸೇರಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.

ಅವರು ಸೋಮವಾರ ಪಟ್ಟಣದ ಸಂಗಮೇಶ್ವರ ಸಭಾ ಭವನದಲ್ಲಿ ಮುದ್ದೇಬಿಹಾಳ ಕಾಂಗ್ರೇಸ್ ಅಭ್ಯರ್ಥಿ ಸಿ.ಎಸ್.ನಾಡಗೌಡ (ಅಪ್ಪಾಜಿ) ಅವರ ಪರವಾಗಿ ಮತ ಯಾಚಿಸಿ ಮಾತನಾಡಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಕಳೆದ 30 ವರ್ಷಗಳಿಂದ ಪಕ್ಷವನ್ನು ಕಟ್ಟಿದೇನೆ. ಬಿಜೆಪಿ ಅಧಿಕಾರಕ್ಕೆ ಬಂದರೆ ನನಗೆ ಲಿಂಗಾಯತ ಕೋಟಾದಲ್ಲಿ ಮುಖ್ಯಮಂತ್ರಿ ಆಗುವ ಅಂಜಿಕೆಯಿಂದ ನನ್ನನ್ನು ಹೊರಹಾಕಿದರು. ನನಗೆ ಅಧಿಕಾರ ಬೇಡ ಕೇವಲ ಶಾಸಕನಾಗಿ ಇದ್ದರೆ ಸಾಕು ಎಂದರೂ ಸಹ ಟಿಕೇಟ್ ಇಲ್ಲಾ, ರಾಜಕೀಯದಿಂದ ನಿವೃತ್ತಿ ಆಗಿ ಎಂದು ಹೇಳಿದರು. ನಾನು ಯಾವ ತಪ್ಪಿಗೆ ನನಗೆ ಟಿಕೇಟ್ ಇಲ್ಲಾ ಅಂತಾ ಹೇಳಿದರೆ ಅವರ ಬಳಿ ಉತ್ತರ ಇಲ್ಲಾ, ಬಿಜೆಪಿಯಲ್ಲಿ ಯಾವುದೇ ಹಿರಿಯ ನಾಯಕರು ಉಳಿಯಬಾರದು ಎನ್ನುವದು ಕೆಲವರ ವ್ಯವಸ್ಥಿತ ತಂತ್ರವಾಗಿದೆ. ಕುಟುಂಬ ರಾಜಕಾರಣವನ್ನು ವಿರೋಧಿಸುವವನು ನಾನು. ನನ್ನ ಕುಟುಂಬಕ್ಕೆ ಟಿಕೇಟ್ ನೀಡುತ್ತೇವೆ ಎಂದರು ಸ್ವಾಭಿಮಾನಕ್ಕೆ ಆತ್ಮ ಗೌರವಕ್ಕೆ ದಕ್ಕೆ ಆಗಿದ್ದರಿಂದ ವಿರೋಧಿಸಿ ಬಿಜೆಪಿಯಿಂದ ಹೊರಬಂದೆ. ಗೌರವದಿಂದ ನಡೆಸುಕೊಳ್ಳುವಂತೆ ಕಾಂಗ್ರೇಸ್ ನಾಯಕರಿಗೆ ಮನವಿ ಮಾಡಿದ್ದೇನೆ. ಇನ್ನು ಮುಂದೆ ಕಾಂಗ್ರೇಸ್ ಪಕ್ಷವನ್ನು ಕಟ್ಟಿ ಬೆಳೆಸಲಿದ್ದೇನೆ. ಇಡಿ ರಾಜ್ಯದಲ್ಲಿ ದೊಡ್ಡದಾದ ಬದಲಾವಣೆ ಆಗಿದೆ. ಹಲವು ನಾಯಕರು ಬಿಜೆಪಿಯನ್ನು ತೊರೆದಿದ್ದಾರೆ. ಸಿ.ಎಸ್.ನಾಡಗೌಡರು ಪ್ರಾಮಾಣಿಕವಾಗಿ ರಾಜಕಾರಣ ಮಾಡಿದ್ದಾರೆ. ಅಭಿವೃದ್ದಿ ಪರವಾಗಿ ಚಿಂತನೆ ಮಾಡುವದು ನಾಡಗೌಡರು ಅಂತವರನ್ನು ಗೆಲ್ಲಿಸಬೇಕು. ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ್ದಾಗ ಹಲವು ಬಿಜೆಪಿ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರೆಲ್ಲಾ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಬೇಕು. ಹಿಂದುಳಿದ ವರ್ಗಗಳಿಗೆ ಅಭಿವೃದ್ದಿಗೆ ಪೂರಕವಾದ ಭರವಸೆಗಳನ್ನು ಕಾಂಗ್ರೇಸ್ ನೀಡಿದೆ. ಪ್ರಸಕ್ತ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ 140 ರಿಂದ 150 ಸೀಟ್‍ಗಳನ್ನು ಪಡೆದು ಅಧಿಕಾರಕ್ಕೆ ಬರಲಿದೆ ಎಂದರು.

ಅಭ್ಯರ್ಥಿ ಸಿ.ಎಸ್.ನಾಡಗೌಡ (ಅಪ್ಪಾಜಿ) ಮಾತನಾಡಿ, ಎಲ್ಲಾ ನಾನೇ ಮಾಡಿದ್ದೇನೆ ಎನ್ನುವ ಅಹಂಕಾರ ನಿಮ್ಮನ್ನೇ ತುಳಿಯಲಿದೆ. ನಿಮ್ಮ ದುಡ್ಡಿನ ಆಟ ನಡೆಯುವದಿಲ್ಲ. ನಿಮ್ಮ ದುಡ್ಡಿಂದ ನಾವು ಅಷ್ಟು ಹೃದಯಗಳನ್ನು ಗೆದ್ದಿದ್ದೇವೆ. ಪೊಲೀಸ್ ಠಾಣೆ ರಾಜಕಾರಣ, ಜನರಿಗೆ ಬೆದರಿಕೆ ಹಾಕುವುದ ನಿಲ್ಲಿಸಬೇಕು. ನಮ್ಮ ಜನಾಂಗದಲ್ಲಿ ಒಡಕಿಲ್ಲ. ಜಾತಿಯ ಸಾಮರಸ್ಯವಿದೆ, ಮತ ಬೇಧವಿಲ್ಲ, ಅಂತಸ್ಥಿನ ಬೇದವಿಲ್ಲ, ಯುವಕರು ಹಿರಿಯರು ಕಿರಿಯರು ಎನ್ನುವ ಬೇಧವಿಲ್ಲ, ಸಿದ್ದಾಂತದ ಆಧಾರದ ಮೇಲೆ, ಎಲ್ಲರು ಒಗ್ಗಟ್ಟಾಗಿ ಚುನಾವಣೆಯನ್ನು ಎದರುಸುತ್ತೇದ್ದೇವೆ. ನೈತಿಕ ಆಧಾರದ ಮೇಲೆ ಚುನಾವಣೆ ಎದುರುತ್ತಿದ್ದೇವೆ. ಸೀರೆ ಮೂಲೆಗೆ ಎಸೆಯಿರಿ. ದುಡ್ಡಿ ಕೊಟ್ಟರು ತೆಗೆದುಕೊಳ್ಳಿ, ಆದರೆ ಮತವನ್ನು ಮಾತ್ರ ಕಾಂಗ್ರೇಸ್ ಪಕ್ಷಕ್ಕೆ ನೀಡಿ. ಜಗದೀಶ ಶೆಟ್ಟರ ಅವರು ಕಾಂಗ್ರೇಸ್ ಪಕ್ಷಕ್ಕೆ ಬಂದಿರುವದರಿಂದ ಕಾಂಗ್ರೇಸ್ ಪಕ್ಷಕ್ಕೆ ಬಲ ಬಂದಿದೆ. ನಮ್ಮ ನಾಯಕತ್ವ ಕೊರತೆ ತುಂಬುವ ಶಕ್ತಿ ಶೆಟ್ಟರ ಅವರಿಗಿದೆ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಮುಖಂಡರುಗಳಾದ ಎಮ್.ಬಿ.ನಾವಾದಗಿ, ಮದನಸಾ ನೀರಲಗಿ, ಬಾಲಾಜಿ ಶುಗರ್ಸ್ ಎಂಡಿ ವೆಂಕಟೇಶ ಪಾಟೀಲ, ಅರವಿಂದ ಕೊಪ್ಪ, ಎಮ್.ಎಮ್.ಪಾಟೀಲ, ಹಾಸ್ಯ ನಟ ರಾಜು ತಾಳಿಕೋಟಿ, ರಾಜು ಕಲಬುರ್ಗಿ, ಸಿ.ಬಿ.ಅಸ್ಕಿ, ಪರಶುರಾಮ ತಂಗಡಗಿ, ನಿವೃತ್ತ ಎಸ್.ಪಿ ಎಸ್.ಬಿ.ಕಟ್ಟಿಮನಿ, ಬಸನಗೌಡ ವಂದಲಿ, ವಿಜಯಸಿಂಗ ಹಜೇರಿ, ಕೆ.ಎಚ್.ಪಾಟೀಲ, ಪ್ರಭುಗೌಡ ಪಾಟೀಲ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಎಮ್.ಎಚ್.ಹಾಲಣ್ಣನವರ, ಸಿದ್ದಣ್ಣ ಮೇಟಿ, ರಾಜು ರಾಯಗೊಂಡ, ಸಿದ್ದನಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.

Latest Indian news

Popular Stories