ಬಿಜೆಪಿ ಸೇರಲು ಮತ್ತು ಮಾರಾಟವಾಗಲು ನಿರಾಕರಿಸಿದ್ದಕ್ಕಾಗಿ ಜೈಲಿನಲ್ಲಿ ನನಗೆ ಹೊಡೆದು ಚಿತ್ರಹಿಂಸೆ ನೀಡಲಾಯಿತು: ಸಾಕೇತ್ ಗೋಖಲೆ, ರಾಜ್ಯಸಭಾ ಸದಸ್ಯ

ಹಿರಿಯ ವಕೀಲ ಕಪಿಲ್ ಸಿಬಲ್ ರೊಂದಿಗೆ ರಾಜ್ಯಸಭಾ ಸದಸ್ಯ ಸಾಕೇತ್ ಗೋಖಲೆ ಅವರು ತಾವು ಜೈಲಿನಲ್ಲಿ ಸುಮಾರು ಒಂದು ವರ್ಷ ಅನುಭವಿಸಿದ ಸಂಕಷ್ಟದ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡಿದ್ದಾರೆ.

ವಿಶೇಷವಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಪ್ರಸ್ತುತ ಆಡಳಿತದ ಸಂದರ್ಭದಲ್ಲಿ ಭಾರತದಲ್ಲಿ ವಿರೋಧ ಪಕ್ಷದ ನಾಯಕರು ಎದುರಿಸುತ್ತಿರುವ ಸಮಸ್ಯೆಯನ್ನು ಅವರ ಮಾತು ಸ್ಪಷ್ಟಪಡಿಸಿದೆ.

“ನಾನು ಬಿಜೆಪಿಗೆ ಮಾರಾಟವಾಗಲು ಮತ್ತು ಸೇರಲು ನಿರಾಕರಿಸಿದೆ, ಆದ್ದರಿಂದ ನನಗೆ ಜೈಲಿನಲ್ಲಿ ಹೊಡೆದು ಚಿತ್ರಹಿಂಸೆ ನೀಡಲಾಯಿತು” ಎಂದು ಅವರು ಹೇಳಿದರು. ಗೋಖಲೆಯವರ ಈ ಹೇಳಿಕೆಯು ರಾಜಕೀಯ ಅಶಾಂತಿ ಮತ್ತು ರಾಷ್ಟ್ರದಲ್ಲಿನ ವಿರೋಧ ಪಕ್ಷಗಳ ದಮನದ ದೊಡ್ಡ ಕಥೆಯನ್ನು ತೆರೆದಿಡುತ್ತದೆ.

“ಇದು ನನ್ನ ಕುರಿತಾಲ್ಲ, ನಾನೊಂದು ನಿದರ್ಶನವೂ ಅಲ್ಲ. ಆದರೆ ಇದು ಭಾರತೀಯ ರಾಜಕೀಯದಲ್ಲಿ ಹೆಚ್ಚುತ್ತಿರುವ ಸರ್ವಾಧಿಕಾರಿದ ಲಕ್ಷಣವನ್ನು ಎತ್ತಿ ತೋರಿಸುತ್ತದೆ. ಪ್ರಜಾಪ್ರಭುತ್ವದ ತತ್ವಗಳ ಅವನತಿ ಮತ್ತು ಸನ್ನಿಹಿತ ಅಪಾಯದ ಬಗ್ಗೆ ಎಚ್ಚರಿಸಿದ್ದಾರೆ.

ಮೋದಿ ಆಡಳಿತವು ಉದ್ದೇಶಪೂರ್ವಕವಾಗಿ ಪ್ರತಿಪಕ್ಷಗಳನ್ನು ಗುರಿಯಾಗಿಸಲು ಮತ್ತು ದುರ್ಬಲಗೊಳಿಸಲು ಕೇಂದ್ರೀಯ ಸಂಸ್ಥೆಗಳನ್ನು ಬಳಸುತ್ತಿದೆ ಎಂದು ಅವರು ಆರೋಪಿಸಿದರು, ಇದು ಭಾರತದ ಪ್ರಜಾಪ್ರಭುತ್ವದ ತಳಹದಿಯನ್ನೇ ಅಪಾಯಕ್ಕೆ ಸಿಲುಕಿಸುತ್ತದೆ ಎಂದಿದ್ದಾರೆ.

Latest Indian news

Popular Stories