ಬೆಂಗಳೂರು: 2024-25ನೇ ಸಾಲಿನ ಬಜೆಟ್ ನ್ನು ವಿಧಾನಸಭೆಯಲ್ಲಿ ಮಂಡಿಸಲು ಆರಂಭಿಸಿದ ಕೆಲವೇ ಹೊತ್ತಿನಲ್ಲಿ ವಿರೋಧ ಪಕ್ಷದ ನಾಯಕರು ಸದನದಲ್ಲಿ ಗಲಾಟೆ, ಗದ್ದಲ ಆರಂಭಿಸಿದರು.ಏನಿಲ್ಲ.. ಏನಿಲ್ಲ ಎಂದು ಹಾಡು ಹೇಳಿ ಪ್ರತಿಭಟನೆ ಆರಂಭಿಸಿದ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಆದರೆ ಬಜೆಟ್ ಮಂಡಣೆಯ ಮುನ್ನವೇ ಏನ್ನಿಲ್ಲ ಎಂದು ವಿಶ್ಲೇಷಿಸಿರುವುದು ಇದೀಗ ಟೀಕೆಗೆ ಗುರಿಯಾಗಿದೆ.
ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಕಡಿಮೆ ಜಿಎಸ್‌ಟಿ ಹಣ ಕೊಟ್ಟಿದೆ ಎಂದು ಆರೋಪ ಮಾಡಿದರು. ಆಗ ಸದನದಲ್ಲಿ ಪ್ರತಿಪಕ್ಷ ಬಿಜೆಪಿ ಸದಸ್ಯರು ಕೇಂದ್ರ ಸರ್ಕಾರದ ವಿರುದ್ಧ ಸುಳ್ಳು ಹೇಳಲು ವೇದಿಕೆ ಮಾಡಿಕೊಂಡಿದ್ದೀರಿ ಎಂದು ಕೆಂಡಾಮಂಡಲರಾಗಿ ಸಿಎಂ ಬಜೆಟ್ ಮಂಡನೆ ವೇಳೆ ಬುರುಡೆ, ಬುರುಡೆ ಎಂದು ಭಿತ್ತಿ ಪತ್ರ ಪ್ರದರ್ಶನ ಮಾಡಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.
ಬಜೆಟ್‌ನಲ್ಲಿ ಏನಿಲ್ಲ, ಓಳು ಬರೀ ಓಳು ಎಂದು ಘೋಷಣೆ ಕೂಗುತ್ತಾ ವಿಧಾನ ಸೌಧದ ಹೊರಗೆ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಆರ್. ಅಶೋಕ್ ಅವರು ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಿದ್ದಾರೆ. ನಾವು ಎಲ್ಲರೂ ಸಿಎಂ ಸಿದ್ದರಾಮಯ್ಯ ಜನರ ಅಭಿವೃದ್ಧಿ ಪರ ಬಜೆಟ್ ಮಂಡಿಸಿತ್ತಾರೆ ಅಂದುಕೊಂಡಿದ್ವಿ. ಆದ್ರೆ ಕಾಂಗ್ರೆಸ್ ಶಾಲು ಹಾಕಿಕೊಂಡು ಬಂದಿದ್ದಾರೆ. ಕೇಂದ್ರ ಸರ್ಕಾರದ ಪದೇ ಪದೇ ತೆಗಳುವ ಕೆಲಸ ಮಾಡ್ತಾ ಇದ್ರು. ಒಮ್ಮೆ ಸುಮ್ಮನೆ ಇರ್ತಾ ಇದ್ವಿ. ಆದ್ರೆ ಪದೇ ಪದೇ ಕೇಂದ್ರ ಸರ್ಕಾರ ಟೀಕೆ ಮಾಡ್ತಾ ಇದ್ದೀರಾ. ಆಡಳಿತ ಮಾಡೋಕೆ ಆಗಲ್ಲ ಅಂದ್ರೆ ಕೆಳಕ್ಕೆ ಇಳಿಯಿರಿ. ದೇಶದಲ್ಲಿ ಎಲ್ಲ ರಾಜ್ಯಗಳು ತೆರಿಗೆ ಪಾವತಿ ಮಾಡಿದ್ದಾರೆ. ಸಿಎಂ ಅವರನ್ನು ವಿರೋಧಿಸಿ ನಾವು ಸಭಾತ್ಯಾಗ ಮಾಡಿದ್ದಾರೆ. ನಾವು ಪ್ರತಿಭಟನೆ ಮಾಡಿರುವುದು ವಿಡಿಯೋ ಕೊಡದೆ ಸ್ಪೀಕರ್ ಘೋರ ಅನ್ಯಾಯ ಮಾಡಿದ್ದಾರೆ. ಸ್ಪೀಕರ್ ಅವರು ಕೆಟ್ಟ ಪರಂಪರೆಯ ಮಾಡಿರುವುದು ಒಳ್ಳೆಯದಲ್ಲ ಎಂದರು.
ಇನ್ನು, ಸಿಎಂ ಸಿದ್ದರಾಮಯ್ಯ ಅವರಿಗೆ ನೋಬಲ್ ಪ್ರಶಸ್ತಿ ಕೊಡಬೇಕು. ಸಿದ್ದರಾಮಯ್ಯ 1 ಲಕ್ಷ ಕೋಟಿ ರೂಪಾಯಿ ಸಾಲದ ಹೊರೆ ಹಾಕಿದ್ದಾರೆ. ಸಾಲವನ್ನು 1 ಲಕ್ಷ ಕೋಟಿ ದಾಟಿಸಿದ ಕೀರ್ತಿ ಸಿದ್ದರಾಮಯ್ಯಗೆ ಸೇರುತ್ತೆ. ಇಡೀ ಬಜೆಟ್‌ನಲ್ಲಿ ನೇಕಾರರ ಹೆಸರಿಲ್ಲ. ರೈತರಿಗೆ ಏನು ಮಾಡಿಲ್ಲ, ಬೆಂಗಳೂರಿಗೆ ಶೂನ್ಯ. ಸುರಂಗ ಮಾರ್ಗ ಮಾಡೋಕೆ ಹೋಗಿದ್ದಾರೆ. ಲೂಟಿ ಮಾಡೋಕೆ ಸುರಂಗ ಮಾರ್ಗ ಮಾಡ್ತಾರೆ. ಈ ಬಜೆಟ್ ಉಪ್ಪು ಉಳಿ ಇಲ್ಲ. ಇದು ಬೋಗಸ್ ಬಜೆಟ್. ನರೇಂದ್ರ ಮೋದಿ ನಿಂದಿಸಲು ಬಳಸಿಕೊಂಡಿದ್ದಾರೆ. ರೈತರಿಗೆ ದ್ರೋಹ ಮಾಡಿರುವ ಬಜೆಟ್ ಎಂದು ಕಿಡಿಕಾರಿದರು.