ಕಾರವಾರ ಸಂಸದರೂ ಸೇರಿದಂತೆ ನಾಲ್ಕೈದು ಸಂಸದರನ್ನು ಬಿಜೆಪಿ ನಿವೃತ್ತಗೊಳಿಸಬೇಕು : ಮುತಾಲಿಕ್

ಕಾರವಾರ : ಕಾರವಾರ ಸಂಸದರೂ ಸೇರಿದಂತೆ ನಾಲ್ಕೈದು ಸಂಸದರನ್ನು ಬಿಜೆಪಿ ನಿವೃತ್ತಗೊಳಿಸಬೇಕು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು‌.

ಸುದ್ದಿಗಾರರ ಜೊತೆ ಮಾತನಾಡಿದ ಅವರು ಕೆಲಸ ಮಾಡದ ,ಜನರಿಂದ ದೂರವೇ ಇರುವ ಸಂಸದರನ್ನು ಬಿಜೆಪಿ ರಾಜಕೀಯ ನಿವೃತ್ತಿಗೊಳಿಸಬೇಕು ಎಂದರು. ಚುನಾವಣೆ ಬಂದಾಗ ಹಿಂದುತ್ವ ಭಾಷಣ ಮಾಡುವವರು ದೇಶಪ್ರೇಮಿಗಳಲ್ಲ ಎಂದು ಮುತಾಲಿಕ್ ಹೇಳಿದರು. ರಾಜಕೀಯ ಸ್ವಾರ್ಥಕ್ಕಾಗಿ ಹಿಂದುತ್ವ ಭಾಷಣ ಮಾಡುವುದು ಬೇರೆ‌ .ನಿಜವಾದ ದೇಶಪ್ರೇಮ ಬೇರೆ. ಜನರಿಗೆ ಇದೆಲ್ಲಾ ಅರ್ಥವಾಗುತ್ತದೆ ಎಂದರು.

ಅಭಿವೃದ್ಧಿ ಮತ್ತು ದೇಶದ ಹಿತ ದೃಷ್ಟಿಯಿಂದ ನಾಲ್ಕೈದು ಸಂಸದರನ್ನು ಬಿಜೆಪಿ ಬದಲಿಸಬೇಕು. ಕೆಲಸ ಮಾಡದೆ,‌ಜನರಿಗೆ ಸಿಗದೇ‌ ಮೈಗಳ್ಳತನ ಮಾಡಿದವರು ಯಾರು ಎಂದು ಪಕ್ಷಕ್ಕೂ ಗೊತ್ತು.‌ಜನರಿಗೂ ಗೊತ್ತು. ಸ್ವಾರ್ಥ ರಾಜಕೀಯ ಮಾಡುವವರನ್ನು , ಸ್ವಂತ ಅಭಿವೃದ್ಧಿಗೆ ಶ್ರಮಿಸುವವ ಸಂಸದರನ್ನು ಪಕ್ಷ ಸ್ವಯಂ ನಿವೃತ್ತಿಗೊಳಿಸಬೇಕೆಂದು ಮುತಾಲಿಕ್ ಬಿಜೆಪಿ ವರಿಷ್ಠರನ್ನು ಆಗ್ರಹಿಸಿದರು‌ .

ಪರೇಶ್ ಮೇಸ್ತಾಗೆ ನ್ಯಾಯ ಕೊಡಿಸಿದರಾ ? :
ಪರೇಶ್ ಮೇಸ್ತಾ ಹೆಣದ ಮೇಲೆ‌ ರಾಜಕೀಯ ಮಾಡಿದವರು , ಅವರ ಕುಟುಂಬಕ್ಕೆ ನ್ಯಾಯ ಕೊಡಿಸಲಿಲ್ಲ. ರಾಜಕೀಯ ಮಾಡಿದವರಿಗೆ ಮತ ಬೇಕು. ದೇಶವಲ್ಲ. ಇವತ್ತಿಗೂ ಪರೇಶ್ ಮೇಸ್ತಾ ಕುಟುಂಬ ಕಣ್ಣೀರು ಹಾಕುತ್ತಿದೆ ಎಂದು ಮುತಾಲಿಕ್ ವಿಷಾಧಿಸಿದರು.

Latest Indian news

Popular Stories