Featured StoryState News

90 ಗ್ರಾಮದಲ್ಲಿ ಬಸ್ಸೇ ಇಲ್ಲ, ಮೊದಲು ಬಸ್ ಬಿಡಿ‌ ಎಂದು ಸ್ವತಃ ಟ್ರೋಲ್’ಗೊಳಗಾದ ಬಿಜೆಪಿ!

ಬೆಂಗಳೂರು: ಮಹಿಳೆಯರಿಗೆ ಉಚಿತ ಬಸ್ ಪಯಣವನ್ನು ಟೀಕಿಸುವ ಭರದಲ್ಲಿ ಪತ್ರಿಕೆಯ ವರದಿಯೊಂದನ್ನು ಪೋಸ್ಟ್ ಮಾಡಿ 90 ಗ್ರಾಮದಲ್ಲಿ ಬಸ್ ವ್ಯವಸ್ಥೆ ಇಲ್ಲ. ಉಚಿತ ಪಯಣ ನಂತರ ಮೊದಲು ಬಸ್ ಬಿಡಿ ಎಂಬ ಪೋಸ್ಟ್ ಬಿಜೆಪಿ ಕರ್ನಾಟಕ ಫೆಸ್ಬುಕ್ ಪೇಜ್ ಪ್ರಕಟಿಸಿತ್ತು. ಆದರೆ ಈ ಪೋಸ್ಟ್ ಬಿಜೆಪಿಗೆ ತಿರುಗುಬಾಣವಾಗಿದೆ.

Screenshot 2023 0611 064702 Featured Story, State News

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಹೆಚ್ಚು ದಿನವಾಗಿಲ್ಲ. ಆದರೆ ಈ‌ಮುಂಚೆ ಅಧಿಕಾರದಲ್ಲಿದ್ದವರು ಬಿಜೆಪಿ. ಹಾಗಾದರೆ ಬಿಜೆಪಿ ಏನು ಮಾಡಿಲ್ಲ ಎಂದಾಯಿತು. ನಿವೇಕೆ ಆ ಗ್ರಾಮಗಳಿಗೆ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಜನ ಟ್ರೋಲ್ ಮಾಡುತ್ತಿದ್ದಾರೆ.

“ಮಾನ್ಯ ಸಿದ್ದರಾಮಯ್ಯನವರೇ,

ತಾವುಗಳು ಚುನಾವಣಾಪೂರ್ವದಲ್ಲಿ ಹೇಳಿರುವಂತೆ ರಾಜ್ಯದ ಸಮಸ್ತ ಮಹಿಳೆಯರಿಗೆ ಬೇಷರತ್ ಉಚಿತ ಪ್ರಯಾಣ ನೀಡಲೇಬೇಕು. ನೀಡದಿದ್ದರೆ ನಾವು ಬಿಡುವುದೂ ಇಲ್ಲ! ಆದರೆ ಬಸ್ ಬೇಕಲ್ಲ?

ರಾಜ್ಯದ ಹಲವಾರು ಭಾಗಗಳಲ್ಲಿ ಸರ್ಕಾರಿ ಬಸ್‌ಗಳ ವ್ಯವಸ್ಥೆಯೇ ಇಲ್ಲ, ಅಲ್ಲಿನ ನಿವಾಸಿಗಳಿಗೆ ಸರ್ಕಾರಿ ಬಸ್ ಸಂಪರ್ಕವೆಂದರೆ ದೂರದಬೆಟ್ಟ!

ಕರಾವಳಿಯ ಹಲವು ತಾಲೂಕುಗಳು ಇಂದಿಗೂ ಖಾಸಗಿ ಬಸ್‌ಗಳನ್ನೇ ಅವಲಂಬಿಸಿದೆ..

ಈ ಸಮಸ್ಯೆಗಳಿಗೊಂದು ಯೋಜನೆ ರೂಪಿಸಿ, ಮೊದಲಿಗೆ ಬಸ್ ಸೌಲಭ್ಯ ಕಲ್ಪಿಸಿಕೊಡಿ! ಉಳಿದದ್ದು ಮತ್ತೆ.”

ಎಂದು ಪೋಸ್ಟ್ ಮಾಡಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button