ಬಿಜೆಪಿಯಲ್ಲೇ ಹೆಚ್ಚು ಭ್ರಷ್ಟಾಚಾರಿಗಳು: ಕಾಂಗ್ರೆಸ್ ಪಟ್ಟಿ ಬಿಡುಗಡೆ

ಹೊಸದಿಲ್ಲಿ: ಭ್ರಷ್ಟಾಚಾರಿಗಳನ್ನು ಸುಮ್ಮನೆ ಬಿಡುವುದಿಲ್ಲ. ಅವರು ಲೂಟಿ ಹೊಡೆದಿರುವ ಒಂದೊಂದು ಪೈಸೆಯನ್ನು ವಾಪಸ್‌ ಜನರಿಗೆ ನೀಡುವೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಕಾಂಗ್ರೆಸ್‌ ತಿರುಗೇಟು ನೀಡಿದೆ. “ಭ್ರಷ್ಟಾಚಾರಿ ಫ‌ಸ್ಟ್‌’ ಒಕ್ಕಣೆಯಡಿ ಬಿಜೆಪಿಯಲ್ಲಿರುವ ಭ್ರಷ್ಟಾಚಾರ ಆರೋಪ ಹೊತ್ತಿರುವವರ ಪಟ್ಟಿಯನ್ನು ಟ್ವೀಟ್‌ ಮಾಡಿದೆ.

ಕಾಂಗ್ರೆಸ್‌ ಮಾಡಿರುವ ಟ್ವೀಟ್‌ನಲ್ಲಿ ಇತ್ತೀಚೆಗಷ್ಟೇ ಬಿಜೆಪಿ ಸೇರಿದ ಕರ್ನಾಟಕದ ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಮತ್ತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿ 11 ನಾಯಕರ ಜತೆಗೆ ಅವರ ಮೇಲಿರುವ ಆರೋಪವನ್ನು ಹೆಸರಿಸಿದೆ.

ಕೇಂದ್ರ ಸಚಿವ ನಾರಾಯಣ ರಾಣೆ (ಭೂ ಹಗರಣ), ಹಿಮಂತ್‌ ಬಿಸ್ವಾ ಶರ್ಮಾ ಮತ್ತು ಸುವೇಂಧು ಅಧಿಕಾರಿ (ಶಾರದಾ ಹಗರಣ), ಶಿವರಾಜ್‌ ಸಿಂಗ್‌ ಚೌಹಾಣ್‌(ವ್ಯಾಪಂ ಹಗರಣ), ಬಸವರಾಜ ಬೊಮ್ಮಾಯಿ(ಪೇ ಸಿಎಂ), ಪ್ರಫ‌ುಲ್‌ ಪಟೇಲ್‌(ಏರ್‌ ಇಂಡಿಯಾ ಹಗರಣ), ರಘುಬರ್‌ ದಾಸ್‌(ಟೀ ಶರ್ಟ್‌ ಹಗರಣ), ಹಸನ್‌ ಮುಶ್ರಿಫ್(1500 ಕೋಟಿ ಹಗರಣ), ಅಜಿತ್‌ ಪವಾರ್‌(ನೀರಾವರಿ ಹಗರಣ), ಪೆಮಾ ಖಂಡು(2000 ಕೋಟಿ ರೂ. ಹಗರಣ) ಮತ್ತು ಗಾಲಿ ಜನಾರ್ದನ ರೆಡ್ಡಿ (35 ಸಾವರಿ ಕೋಟಿ ರೂ. ಗಣ ಹಗರಣ) ಹೆಸರುಗಳು ಮತ್ತು ಫೋಟೋಗಳನ್ನು ಟ್ವೀಟ್‌ ಮಾಡಿದೆ.

Latest Indian news

Popular Stories