Featured StoryAccident NewsKodagu

ಅಮ್ಮತ್ತಿ ಕೊಡವ ಸಮಾಜ ಮಾಜಿ ಅಧ್ಯಕ್ಷ ಮುಕೊಂಡ ಬೋಸ್ ದೇವಯ್ಯ ಅಪಘಾತದಲ್ಲಿ ನಿಧನ.

ಮನೆ ಬಳಿಯೇ ಅಪಘಾತ ಸಂಭವಿಸಿ ಮನೆಗೆ ಇಟ್ಟಿಗೆ ತಂದಿದ್ದ ಲಾರಿ ರಿವರ್ಸ್ ಮಾಡುವ ಸಂದರ್ಭ ಆಕಸ್ಮಿಕವಾಗಿ ಹಿಂಬದಿ ನಿಂತಿದ್ದ ಬೋಸ್ ಅವರಿಗೆ ಡಿಕ್ಕಿಯಾಗಿ ಸ್ಥಳದಲ್ಲಿ ಕೊನೆಯ ಉಸಿರೆಳೆದಿದ್ದಾರೆ.

ಅಮ್ಮತ್ತಿ ಕೊಡವ ಸಮಾಜದ ಅಭಿವೃದ್ಧಿಗೆ ಕಾರಣಕರ್ತರಾಗಿದ್ದ ಬೋಸ್,ಗೋಣಿಕೊಪ್ಪ ಎಪಿಎಂಸಿ ಅಧ್ಯಕ್ಷರಾಗಿ ಕೂಡ ಕಾರ್ಯನಿರ್ವಹಿಸಿದ್ದರು.

ಅಖಿಲ ಕೊಡವ ಸಮಾಜದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಬೋಸ್ ಬಿಜೆಪಿ ಮುಖಂಡರಾಗಿ ಸಕ್ರಿಯ ರಾಗಿದ್ದರು.ಸದಾ ಹಸನ್ಮುಖಿಯಾಗಿದ್ದ, ಎಲ್ಲರ ಜೊತೆಯೂ ವಿನಯದಿಂದ ವರ್ತಿಸುತ್ತಿದ್ದ ಬೋಸ್ ಜನಸ್ನೇಹಿ ಗುಣದಿಂದ ಹೆಸರುವಾಸಿಯಾಗಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button