ಆರ್ಟಿಕಲ್ 35A ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಿದೆ: ಭಾರತದ ಮುಖ್ಯ ನ್ಯಾಯಮೂರ್ತಿ ಅಭಿಪ್ರಾಯ

ನವ ದೆಹಲಿ: (ದಿ ಹಿಂದುಸ್ತಾನ್ ಗಝೆಟ್, ರಾಷ್ಟ್ರೀಯ ಸುದ್ದಿಗಳು)

ಸಂವಿಧಾನದ 35ಎ ವಿಧಿಯು ಜಮ್ಮು ಮತ್ತು ಕಾಶ್ಮೀರದಲ್ಲಿ ವಾಸಿಸದ ಜನರಿಗೆ ಕೆಲವು ಪ್ರಮುಖ ಸಾಂವಿಧಾನಿಕ ಹಕ್ಕುಗಳಿಂದ ವಂಚಿತವಾಗಿಸಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಇಂದು ಹೇಳಿದ್ದಾರೆ. 

ಸಮಾನತೆ, ರಾಜ್ಯ ಸರ್ಕಾರದಲ್ಲಿ ಉದ್ಯೋಗ ಮತ್ತು ಭೂಮಿ ಖರೀದಿಸುವ ಹಕ್ಕು — “ಈ ಎಲ್ಲಾ ಹಕ್ಕುಗಳನ್ನು ನಾಗರಿಕರಿಂದ ಕಸಿದುಕೊಳ್ಳುತ್ತದೆ… ಏಕೆಂದರೆ ನಿವಾಸಿಗಳು (ಜಮ್ಮು ಮತ್ತು ಕಾಶ್ಮೀರದ) ವಿಶೇಷ ಹಕ್ಕುಗಳನ್ನು ಹೊಂದಿದ್ದರು, ಅನಿವಾಸಿಗಳನ್ನು ಈ ಹಕ್ಕುಗಳಿಂದ ಹೊರಗಿಡಲಾಗಿತ್ತು” ಎಂದರು. ಭಾರತೀಯ ಸಂವಿಧಾನವು “ಜಮ್ಮುಕಾಶ್ಮೀರದ ಸಂವಿಧಾನಕ್ಕಿಂತ ಉನ್ನತ ಸ್ಥರದಲ್ಲಿ” ಇರುವ ದಾಖಲೆಯಾಗಿದೆ ಎಂದು ಅವರು ಕೇಂದ್ರದ ಕ್ರಮ ಸಮರ್ಥಿಸಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ 370 ನೇ ವಿಧಿಯನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ 11 ನೇ ದಿನದ ವಿಚಾರಣೆಯ ಸಂದರ್ಭದಲ್ಲಿ ಅವರ ಅವಲೋಕನಗಳು ಕೇಳಿ ಬಂದವು.

Latest Indian news

Popular Stories