ನಿಗೂಢ ಕಲೆಗಳ ಅಭ್ಯಾಸ ಶಂಕೆ: ದಂಪತಿಯನ್ನು ಮರಕ್ಕೆ ನೇತು ಹಾಕಿ ಬೆತ್ತದಿಂದ ಹೊಡೆದ ಗ್ರಾಮಸ್ಥರು

ಸಂಗಾರೆಡ್ಡಿ: ದಂಪತಿಗಳನ್ನು ಮರಕ್ಕೆ ನೇತು ಹಾಕಿ ಜನರು ಬೆತ್ತದಿಂದ ಹೊಡೆದ ಘಟನೆ ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಸಂಗಾರೆಡ್ಡಿ ಜಿಲ್ಲೆಯ ಕೊಲ್ಕುರು ಗ್ರಾಮದಲ್ಲಿ ನಿಗೂಢ ಕಲೆಗಳನ್ನು ಅಭ್ಯಾಸ ಮಾಡುತ್ತಿದ್ದಾರೆ ಎಂಬ ಶಂಕೆಯ ಮೇಲೆ ದಂಪತಿಗಳ ಮೇಲೆ ಜನರು ಹಲ್ಲೆ ನಡೆಸಿದ್ದಾರೆ. ಶ್ಯಾಮಮ್ಮ ಮತ್ತು ಯಾದಯ್ಯ ಎಂಬ ದಂಪತಿಗಳನ್ನು ಜನರು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ್ದಾರೆ.

ಘಟನೆಯ ಬಗ್ಗೆ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಇಬ್ಬರನ್ನು ರಕ್ಷಿಸಿದ್ದಾರೆ. ದಂಪತಿಗಳಿಬ್ಬರು ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Latest Indian news

Popular Stories