ದರ್ಶನ್ ಮುಖದಲ್ಲಿ ಕಾಡಿದ ಚಿಂತೆಯ ಕಾರ್ಮೋಡ; ಜೈಲ್​ನಲ್ಲಿ ನಿದ್ದೆ ಮಾಡದೆ ಕಳೆದ ನಟ

ನಟ ದರ್ಶನ್ (Darshan) ಅವರು ದೊಡ್ಡ ಸಂಕಷ್ಟ ಎದುರಿಸಿದ್ದಾರೆ. ಚಿತ್ರದುರ್ಗದ ವ್ಯಕ್ತಿ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ 13 ಮಂದಿ ಅರೆಸ್ಟ್ ಆಗಿದ್ದಾರೆ. ದರ್ಶನ್ ಆಪ್ತೆ ಎನಿಸಿಕೊಂಡಿರುವ ಪವಿತ್ರಾ ಗೌಡ ಕೂಡ ಈ ಪ್ರಕಣದಲ್ಲಿ ಎ1 ಅಪರಾಧಿ ಎನಿಸಿಕೊಂಡಿದ್ದು, ದರ್ಶನ್ ಎ2 ಅಪರಾಧಿ ಆಗಿದ್ದಾರೆ. ಸದ್ಯ ಕೊಲೆ ವಿಚಾರದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದ ಬಗ್ಗೆ ದರ್ಶನ್ ಅವರು ತೀವ್ರ ಚಿಂತೆಗೆ ಒಳಗಾಗಿದ್ದಾರೆ. ಜೈಲ್​ ಸೆಲ್​ನಲ್ಲಿರೋ ಅವರು ರಾತ್ರಿಯೆಲ್ಲ ನಿದ್ದೆ ಮಾಡಿಲ್ಲ.

ಅನ್ನಪೂರ್ಣೇಶ್ವರಿ ನಗರ ಠಾಣೆಯ ಲಾಕಪ್​ನಲ್ಲಿ ದರ್ಶನ್ ಹಾಗೂ ಸಹಚರರು ಇದ್ದಾರೆ. ರಾತ್ರಿ ದರ್ಶನ್​ ಅವರಿಗೆ ಹೋಟೆಲ್​ನಿಂದ ದೊನ್ನೆ ಬಿರಿಯಾನಿ ತರಿಸಲಾಗಿದೆ. ಅದನ್ನು ಎಲ್ಲರೂ ತಿಂದಿದ್ದಾರೆ. ಇತ್ತ ದರ್ಶನ್​ಗೆ ರಾತ್ರಿಯೆಲ್ಲ ನಿದ್ದೆ ಬಂದಿಲ್ಲ. ರಾತ್ರಿ ವೇಳೆ ಲಾಕಪ್​ನಲ್ಲಿ ಎಚ್ಚರಗೊಂಡು ಕುಳಿತಿದ್ದಾರೆ. ಬಂಧನದ ಬಳಿಕ ಅವರು ಚಿಂತಾಕ್ರಾಂತರಾಗಿದ್ದಾರೆ. ಭದ್ರತೆ ದೃಷ್ಟಿಯಿಂದ ಅನ್ನಪೂರ್ಣೇಶ್ವರಿ ನಗರ ಠಾಣೆ ಬಳಿ ಕೆಎಸ್​ಆರ್​ಪಿ ತುಕಡಿ ನಿಯೋಜನೆ ಮಾಡಲಾಗಿದೆ.

ಕ್ಷುಲ್ಲಕ ಕಾರಣಕ್ಕಾಗಿ ರೇಣುಕಾ ಸ್ವಾಮಿ ಎಂಬುವವರನ್ನು ಹತ್ಯೆ ಮಾಡಲಾಗಿದೆ. ಈ ಆರೋಪದಲ್ಲಿ ದರ್ಶನ್​, ಪವಿತ್ರಾ ಗೌಡ, ವಿ. ವಿನಯ್, ಎಸ್​. ಪ್ರದೋಶ್​, ಆರ್. ನಾಗರಾಜು, ಕೆ. ಪವನ್, ಎಂ. ಲಕ್ಷ್ಮಣ್​, ದೀಪಕ್​ ಕುಮಾರ್, ನಂದೀಶ್​, ನಿಖಿಲ್ ನಾಯಕ್​, ಕಾರ್ತಿಕ್​, ರಾಘವೇಂದ್ರ ಅಲಿಯಾಸ್​ ರಾಘು, ಕೇಶವಮೂರ್ತಿ ಪೊಲೀಸರ ಅತಿಥಿ ಆಗಿದ್ದಾರೆ. ಎಲ್ಲರನ್ನೂ ಪೊಲೀಸ್​ ಕಸ್ಟಡಿಗೆ ನೀಡಲಾಗಿದೆ.

ಆರು ದಿನಗಳ ಕಾಲ ದರ್ಶನ್ ವಿಚಾರಣೆ ನಡೆಯಲಿದೆ. ಇಂದಿನಿಂದ ಸಾಕ್ಷ್ಯ ಕಲೆ ಹಾಕೋ ಕೆಲಸ ಆರಂಭ ಆಗಲಿದೆ. ಕಿಡ್ನಾಪ್ ಮಾಡಿ ಕರೆದೊಯ್ದ ಜಾಗಗಳ ಮಹಜರನ್ನು ಪೊಲೀಸರು ನಡೆಸಲಿದ್ದಾರೆ. ರೇಣುಕಾಸ್ವಾಮಿ ಕೂಡಿ ಹಾಕಿ ಹಲ್ಲೆ ಮಾಡಿದ ಜಾಗ, ಶವ ಎಸೆದ ಜಾಗದಲ್ಲಿ ಮಹಜರು ನಡೆಯಲಿದೆ.

Latest Indian news

Popular Stories