ಸುಳ್ಳು ಪ್ರಕರಣ ದಾಖಲಿಸಿ ನನ್ನ ಮಾನ ಹಾರಾಜಿಗೆ ಯತ್ನ – ಬಿಜೆಪಿ ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ದಾವೂದ್ ಅಬೂಬಕ್ಕರ್

ಉಡುಪಿ: ಪೊಲೀಸ್ ಅಧಿಕಾರಿ ಮತ್ತು ಕಾಂಗ್ರೆಸ್ ಮುಖಂಡರು ಸೇರಿ ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಅವರು ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ದಾವೂದ್ ಇಬ್ರಾಹಿಂ ಹೇಳಿದರು.

ನಕಲಿ ಚಿನ್ನ ಅಡವಿಟ್ಟು ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಪ್ರಕರಣದಲ್ಲಿ ಅವರ ಹೆಸರು ಕೇಳಿ ಬಂದಿತ್ತು. ಆ ಕುರಿತು ಇಂದು ಕಿದಿಯೂರು ಹೊಟೇಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಪ್ರಕರಣದ ಕುರಿತು ಸ್ಪಷ್ಟನೆ ನೀಡಿದರು.

ಘಟನೆ ನಡೆದದ್ದು ಸೆಪ್ಟೆಂಬರ್ 5 ರಂದು ಆದರೆ ಪ್ರಕರಣ 8 ರಂದು ದಾಖಲಿಸಲಾಗಿದೆ ಎಂದರು. ಈ ಪ್ರಕರಣದ ಹಿಂದೆ ಮಂಜಪ್ಪ, ಪ್ರಕಾಶ್ ಎಸೈ,ಬ್ಯಾಂಕ್ ಮ್ಯಾನೇಜರ್ ಮತ್ತು ಕೃಷ್ಣಮೂರ್ತಿ ಆಚಾರ್ಯ ಇದ್ದಾರೆ ಎಂದರು. ನಾನು ಒಂದು ಪಕ್ಷದಲ್ಲಿದ್ದು ಜವಾಬ್ದಾರಿ ಉಳ್ಳವನು ಈ ರೀತಿ ಮಾಡುವುದಿಲ್ಲ ಎಂದು ಸ್ಟಷ್ಟನೆ ನೀಡಲು ಪ್ರಯತ್ನಿಸಿದರು.

ಹಲವು ವರ್ಷದಿಂದ ನನ್ನ ಹಿಂದೆ ಕಾಂಗ್ರೆಸ್ ನವರು ಇದ್ದು ಪಕ್ಷಬಿಡುವಂತೆ ಒತ್ತಾಯಿಸುವ ಪ್ರಯತ್ನ ಮಾಡುತ್ತಿದ್ದಾರೆ.ಏನೇ ಚಿತ್ರ ಹಿಂಸೆ ಕೊಟ್ಟರೂ ಪಕ್ಷಬಿಡುವುದಿಲ್ಲ. ನನ್ನ ಉಸಿರು ಇರುವವರೆಗೆ ಬಿಜೆಪಿ ಪಕ್ಷದಲ್ಲಿ ಇರುತ್ತೇನೆ ಎಂದರು.

Latest Indian news

Popular Stories