ಗೊಳವಲ್ಕರ್‌ ಬರಹ ಟ್ವೀಟ್: ದಿಗ್ವಿಜಯ್ ಸಿಂಗ್ ವಿರುದ್ಧ ಪ್ರಕರಣ ದಾಖಲು

ಭೋಪಾಲ್‌/ಇಂದೋರ್‌: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ವಿರುದ್ಧ ಇಂದೋರ್‌ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಆರ್‌ಎಸ್‌ಎಸ್‌ನ ಎರಡನೇ ಸರಸಂಘಚಾಲಕ, ಗ ಗೊಳವಲ್ಕರ್‌ ವಿರುದ್ಧ ಟ್ವೀಟೊಂದನ್ನು ಹಂಚಿಕೊಂಡಿದ್ದರ ಹಿನ್ನೆಲೆಯಲ್ಲಿ ಈ ಬೆಳವಣಿಗೆಯಾಗಿದೆ.

ದಿಗ್ವಿಜಯ್‌ ಹಂಚಿಕೊಂಡಿದ್ದರ ಚಿತ್ರದಲ್ಲಿ, “ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಸಮಾನಹಕ್ಕುಗಳನ್ನು ನೀಡುವುದಕ್ಕಿಂತ, ನಾನು ಬ್ರಿಟಿಷ್‌ ರಾಜ್ಯದಲ್ಲಿ ಬದುಕಲು ಬಯಸುತ್ತೇನೆ’ ಎಂದು ಗೊಳವಲ್ಕರ್‌ ಹೇಳಿದ್ದಾರೆಂಬ ಬರಹವಿದೆ. ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌, ಆರ್‌ಎಸ್‌ಎಸ್‌ ಪ್ರಚಾರ ವಿಭಾಗದ ಸುನೀಲ್‌ ಅಂಬೇಕರ್‌ ತೀವ್ರ ಶಬ್ದಗಳಲ್ಲಿ ಖಂಡಿಸಿದ್ದಾರೆ.

Latest Indian news

Popular Stories