ಮಗಳನ್ನು ಮದುವೆಯಾದ ತಂದೆಯೆಂದು ಸುಳ್ಳು ಸುದ್ದಿ ಪ್ರಕಟಿಸಿದ ಪಬ್ಲಿಕ್ ಟಿವಿ!

ಬೆಂಗಳೂರು: ಸುಳ್ಳು ಸುದ್ದಿಯ ಝಮಾನ, ವಾಟ್ಸಪ್ ನಲ್ಲಿ ಹರಿದಾಡುವ ಧೃಡೀಕೃತವಲ್ಲದ ಎಷ್ಟೋ ವಿಚಾರಗಳು ಇಂದು ಮುಖ್ಯವಾಹಿನಿಯ ಸುದ್ದಿಯಾಗಿ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಯುತ್ತದೆ. ಇದೀಗ ಪಬ್ಲಿಕ್ ಟಿವಿ ಸುದ್ದಿ ಧೃಡೀಕರಿಸದೆ ಮಗಳನ್ನು ಮದುವೆಯಾದ ತಂದೆ ಎಂಬ ಸುಳ್ಳು ಸುದ್ದಿ ಪ್ರಕಟಿಸಿದೆ.

Screenshot 2023 0710 083600 Featured Story, State News
ಪ್ರಕಟಿಸಿದ ಸುದ್ದಿ

“ಸ್ವಂತ ತಂದೆಯನ್ನೇ ಮದುವೆಯಾದ ಪಾಕಿಸ್ತಾನಿ ಯುವತಿ – ತಂದೆಗೆ ಈಕೆ 4ನೇ ಹೆಂಡತಿ!” ಎಂದು ಹೆಡ್’ಲೈನ್ಸ್ ನೀಡಲಾಗಿದೆ. ಹಿಂದಿ ಮಾಧ್ಯಮಗಳು ಈ ಸುದ್ದಿ ಪ್ರಕಟಿಸಿತ್ತು. ನಂತರ ಅಲ್ಟ್ ನ್ಯೂಸ್ ನಡೆಸಿದ ಫ್ಯಾಕ್ಟ್ ಚೆಕ್ ನಂತರ ತಿದ್ದಿಕೊಳ್ಳುವ ಪ್ರಯತ್ನ ಮಾಡಿದೆ.

ಅಲ್ಟ್ ನ್ಯೂಸ್ ಪತ್ರಕರ್ತ ಝುಬೇರ್‌ ಸಂಭಾಷಣೆಯ ವೀಡಿಯೋ ಪ್ರಕಟಿಸಿ ಅವರಿಬ್ಬರು ತಂದೆ ಮಗಳು ಅಲ್ಲ ಎಂಬುವುದನ್ನು ಧೃಡಿಕರಿಸಿದ್ದಾರೆ. ಅದರೊಂದಿಗೆ ಆತ ಈ ಮುಂಚೆ ಮದುವೆಯಾದವರೊಂದಿಗೆ ವಿಚ್ಚೇದನ ಪಡೆದ ನಂತರ ಮದುವೆಯಾಗಿರುವ ಕುರಿತು ಸತ್ಯಾಸತ್ಯತೆ ಹೊರ ಹಾಕಿದ್ದಾರೆ. ಎಬಿಪಿ ನ್ಯೂಸ್ ಸೇರಿದಂತೆ ಹಲವು ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ಸುದ್ದಿಯ ಸತ್ಯಾಸತ್ಯತೆ ಪರಿಶೀಲಿಸದೆ ಸುದ್ದಿ ಪ್ರಕಟಿಸಿ ಪೇಚಿಗೆ ಒಳಗಾಗಿತ್ತು. ಇದೀಗ ಕನ್ನಡದ ಪಬ್ಲಿಕ್ ಟಿವಿ ಯಥಾವತ್ ಬಟ್ಟಿ ಇಳಿಸಿ ಮಾಧ್ಯಮದ ಕನಿಷ್ಠ ಎಥಿಕ್ಸ್’ಗೆ ಎಳ್ಳು ನೀರು ಬಿಟ್ಟು ಸುದ್ದಿಯಲ್ಲಿದೆ.

Latest Indian news

Popular Stories