ಸಚಿವ ದಿನೇಶ್ ಗುಂಡೂರಾವ್ ಪ್ರಯಾಣಿಸುತ್ತಿದ್ದ ವಿಮಾನ ಮಂಗಳೂರಿನ ಬದಲು ಕಣ್ಣೂರಲ್ಲಿ ಲ್ಯಾಂಡಿಂಗ್

ಮಂಗಳೂರು, ಜುಲೈ 22: ಪ್ರತಿಕೂಲ ಹವಾಮಾನ ಹಿನ್ನೆಲೆ ಬೆಂಗಳೂರು-ಮಂಗಳೂರು ವಿಮಾನ(Bengaluru To Mangaluru Flight) ಸಂಚಾರ ವ್ಯತ್ಯಯವಾಗಿದೆ. ಮಂಗಳೂರು ಏರ್ಪೋರ್ಟ್ ನಲ್ಲಿ(Mangaluru Airport) ಲ್ಯಾಂಡ್ ಆಗಬೇಕಿದ್ದ ವಿಮಾನ ಕಣ್ಣೂರಿಗೆ ಡೈವರ್ಟ್ ಆಗಿದೆ(Kannur Airport). ಈ ವಿಮಾನದಲ್ಲಿ ಆರೋಗ್ಯ ಸಚಿವರು ಪ್ರಯಾಣಿಸುತ್ತಿದ್ದರು(Dinesh Gundu Rao) ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. 

ಬೆಂಗಳೂರಿನಿಂದ ಬೆಳಗ್ಗೆ 9.55ಕ್ಕೆ ಹೊರಟಿದ್ದ ಇಂಡಿಗೋ ವಿಮಾನ ಬೆ.11 ಗಂಟೆಗೆ ಮಂಗಳೂರು ಏರ್ಪೋರ್ಟ್ ನಲ್ಲಿ‌ ಲ್ಯಾಂಡ್ ಆಗಬೇಕಿತ್ತು. ಆದ್ರೆ ಪ್ರತಿಕೂಲ ಹವಾಮಾನ ಹಿನ್ನೆಲೆ ಕೇರಳದ ಕಣ್ಣೂರು ಏರ್ಪೋರ್ಟ್ ನಲ್ಲಿ ಲ್ಯಾಂಡ್ ಆಗಿದೆ.

ಈ ವಿಮಾನದಲ್ಲಿ ಆರೋಗ್ಯ ಸಚಿವ, ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರಯಾಣಿಸುತ್ತಿದ್ದರು. ಸದ್ಯ ಹವಾಮಾನ ಬದಲಾವಣೆ ಬೆನ್ನಲ್ಲೇ ಮಂಗಳೂರು ಏರ್ಪೋರ್ಟ್ ನಲ್ಲಿ ವಿಮಾನ ಲ್ಯಾಂಡಿಂಗ್​ಗೆ ಅನುಮತಿ ನೀಡಲಾಗಿದೆ. ಹೀಗಾಗಿ ಇದೀಗ ಮತ್ತೆ ಮಂಗಳೂರು ಏರ್ಪೋರ್ಟ್ ನತ್ತ ವಿಮಾನ ಟೇಕಾಫ್ ಆಗಿದೆ. ಕೆಲವೇ ಕ್ಷಣಗಳಲ್ಲಿ ಇಂಡಿಗೋ ವಿಮಾನ ಮಂಗಳೂರು ಏರ್ಪೋರ್ಟ್ ತಲುಪಲಿದೆ ಎಂಬ ಮಾಹಿತಿ ಸಿಕ್ಕಿದೆ.

Latest Indian news

Popular Stories