Vijayapura | ಕಾಂಗ್ರೆಸ್ ಸರ್ಕಾರ ಸರ್ವಾಧಿಕಾರಿ ಧೋರಣೆ ಆರೋಪ: ಬಿಜೆಪಿಯಿಂದ ಪ್ರತಿಭಟನೆ

ವಿಜಯಪುರ: ಅಧಿವೇಶನದಲ್ಲಿ ಮಾರ್ಷಲ್‍ಗಳ ದೌರ್ಜನ್ಯ, ಕಾಂಗ್ರೆಸ್ ಸರ್ಕಾರದ ಸಂವಿಧಾನ ವಿರೋಧಿ ಧೋರಣೆ, 10 ಶಾಸಕರನ್ನು ಅಮಾನತ್ತು ಮಾಡಿರುವ ಸಭಾಧ್ಯಕ್ಷರ ಅಸಂವಿಧಾನಿಕ ನಡೆ ಹಾಗೂ ಹಿರಿಯ ಶಾಸಕರೆಂಬ ಕಾಳಜಿಯೂ ಇಲ್ಲದೆ ನಗರ ಶಾಸಕರಾದ ಬಸನಗೌಡ ರಾ ಪಾಟೀಲ ಯತ್ನಾಳ ಅವರನ್ನು ಎಳೆದಾಡಿ ಅಪಮಾನ ಮಾಡಿರುವುದು ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ಶನಿವಾರ ನಗರದಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಹಲಗೆ ಭಾರಿಸುವುದರ ಮೂಲಕ ಪ್ರತಿಭಟನೆ ನಡೆಸಿದರು.

ನಗರದ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಮೆರವಣಿಗೆ ಮೂಲಕ ಗಾಂಧಿ ಚೌಕ್‍ಗೆ ತೆರಳಿ, ಪ್ರತಿಭಟನಾ ಸಭೆ ನಡೆಸಿ, ಕಾಂಗ್ರೆಸ್ ಸರ್ಕಾರದ ಸಂವಿಧಾನ ವಿರೋಧ ಧೋರಣೆ ಖಂಡಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಮಾತನಾಡಿ, ದೇಶ ವಿರೋಧಿ ಚಟುವಟಿಕೆ ನಡೆಸುವರು ಕಾಂಗ್ರೆಸ್ ಆಡಳಿತದಲ್ಲಿ ಚುರುಕಾಗುತ್ತಾರೆ. ಅದಕ್ಕೆ ಕಾರಣ ರಕ್ಷಣೆಯಾಗಿ ನಿಲ್ಲುವುದು. ನೀವು ಏನು ಮಾಡಿದರು ನಡೆಯುತ್ತದೆ ಎಂಬ ಅಹಂಕಾರ ನಡೆಯುವುದಿಲ್ಲ. ಮಾಡಿರುವ ತಪ್ಪನ್ನು ಎತ್ತಿ ತೋರಿಸಿದಕ್ಕೆ ಶಾಸಕರಿಗೆ ಅಪಮಾನ ಮಾಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನ ಕಾರ್ಯದರ್ಶಿ ಶಿವರುದ್ರ ಬಾಗಲಕೋಟ ಮಾತನಾಡಿ, ಕಾಂಗ್ರೆಸ್ ಪಕ್ಷದ ಸಭೆಗೆ ಐಎಎಸ್ ಅಧಿಕಾರಿಗಳನ್ನು ಬಳಸಿಕೊಂಡಿರುವ ತಪ್ಪನ್ನು ಪ್ರಶ್ನಿಸಿದಕ್ಕೆ, ಪಕ್ಷಾತೀತವಾಗಿ ಇರಬೇಕೆಂಬ ನಿಯಮ ಗಾಳಿಗೆ ತೂರಿ, ಕಾಂಗ್ರೆಸ್‍ನ ಕೈಗೊಂಬೆಯಾಗಿ ನಮ್ಮ 10 ಶಾಸಕರನ್ನು ಅಮಾನತ್ತು ಮಾಡಿದಲ್ಲದೆ, ಹಿರಿಯ ಶಾಸಕರು ಎಂಬ ಮಾನವೀಯತೆ ಸಹ ಇಲ್ಲದೆ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಎಳೆದಾಡಿ ಅಪಮಾನ ಮಾಡುವ ಮೂಲಕ ಅಮಾನವಿಯ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಇದು ಹೀಗೆ ಮುಂದುವರೆದರೆ ಬಿಜೆಪಿ ಪಕ್ಷ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಮುಖಂಡ ವಿಜುಗೌಡ ಪಾಟೀಲ ಮಾತನಾಡಿ, ಗ್ಯಾರಂಟಿ ನಂಬಿ ಅಧಿಕಾರ ಕೊಟ್ಟ ಜನರಿಗೆ ಕಾಂಗ್ರೆಸ್ ಸರ್ಕಾರ ಮೋಸ ಮಾಡುತ್ತಿದೆ ಎಂದು ದೂರಿದರು.

ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಮುಖಂಡರಾದ ಚಂದ್ರಶೇಖರ ಕವಟಗಿ ಮಾತನಾಡಿದರು.

ನಗರ ಘಟಕದ ಅಧ್ಯಕ್ಷ ಮಳುಗೌಡ ಪಾಟೀಲ, ಬೆಳಗಾವಿ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಬಿಜೆಪಿ ಮುಖಂಡರಾದ ವಿವೇಕಾನಂದ ಡಬ್ಬಿ, ಭೀಮಾಶಂಕರ ಹದನೂರ, ಸುರೇಶ ಬಿರಾದಾರ, ಉಮೇಶ ಕೋಳಕೂರ, ಚಿದಾನಂದ ಚಲವಾದಿ, ಕಾಸುಗೌಡ ಬಿರಾದಾರ, ಮಹಾನಗರ ಪಾಲಿಕೆ ಸದಸ್ಯರಾದ ರಾಜಶೇಖರ ಮಗಿಮಠ, ಎಂ.ಎಸ್.ಕರಡಿ, ಪ್ರೇಮಾನಂದ ಬಿರಾದಾರ, ರಾಜಶೇಖರ ಕುರಿಯವರ, ರಾಹುಲ್ ಜಾಧವ, ಕಿರಣ ಪಾಟೀಲ, ವಿಠ್ಠಲ ಹೊಸಪೇಟ, ಮಲ್ಲಿಕಾರ್ಜುನ ಗಡಗಿ, ರಾಜು ಗೋಸಾವಿ, ಮಹೇಶ ಒಡೆಯರ, ಮುಖಂಡರಾದ ರಾಘವ ಅಣ್ಣಿಗೇರಿ, ರಮೇಶ ಬಿರಾದಾರ (ಬಬಲೇಶ್ವರ) ಪಾಂಡು ಸಾಹುಕಾರ ದೊಡಮನಿ, ಚಂದ್ರು ಚೌದರಿ, ಅಶೋಕ ಬೆಲ್ಲದ, ಲಕ್ಷ್ಮಣ ಜಾಧವ, ಮಡಿವಾಳ ಯಾಳವಾರ, ಶಂಕರ ಹೂಗಾರ, ಬಸವರಾಜ ಗೊಳಸಂಗಿ, ವಿಠ್ಠಲ ನಡುವಿನಕೇರಿ, ಶ್ರೀಶೈಲ ಕಣಮುಚನಾಳ, ದತ್ತಾ ಗೊಲಂಡೆ, ಪ್ರವೀಣ ಬಿಜ್ಜರಗಿ, ವಿಕ್ರಮ ಗಾಯಕವಾಡ, ಗುರು ಗಚ್ಛಿನಮಠ, ನಾಗರಾಜ ಬಿರಾದಾರ, ಸಚೀನ ಕೋರಿ, ವಿಜಯ ಜೋಶಿ, ಕೃಷ್ಣಾ ಗುನ್ನಾಳಕರ, ರಮೇಶ ಬಿರಾದಾರ, ಪ್ರಕಾಶ ರಾಠೋಡ, ಕಾಂತು ಶಿಂದೆ, ಸಂತೋಷ ತಳಕೇರಿ, ಲಕ್ಷ್ಮೀ ಕನ್ನೋಳ್ಳಿ, ವಿಠ್ಠಲ ಕಿರಸೂರ, ಡಾ. ಬಾಬು ರಾಜೆಂದ್ರ ನಾಯಕ, ರಾಜೇಶ ತವಸೆ, ವಿನಾಯಕ ದಹಿಂಡೆ, ರಾಜು ತಾಳಿಕೋಟಿ ಸೇರಿದಂತೆ ಎಲ್ಲಾ ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

Latest Indian news

Popular Stories