ಏರೋನಿಕ್ಸ್ ಎಂಡಿ, ಸಿಇಒ ಕೊಲೆ ಪ್ರಕರಣ: ಜಿ-ನೆಟ್ ಕಂಪೆನಿ ಮಾಲೀಕ ಅರುಣ್ ಕುಮಾರ್ ಬಂಧನ

ಬೆಂಗಳೂರು: ಎರಡು ದಿನಗಳ ಹಿಂದೆ ಬೆಂಗಳೂರಿನ ಅಮೃತಹಳ್ಳಿಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣ ನಗರವಾಸಿಗಳನ್ನು, ಪೊಲೀಸರನ್ನು ಬೆಚ್ಚಿಬೀಳಿಸಿದೆ. 

ಏರೋನಿಕ್ಸ್ ಇಂಟರ್ನೆಟ್​ ಕಂಪನಿ ಎಂಡಿ ಫಣೀಂದ್ರ ಸುಬ್ರಹ್ಮಣ್ಯ ಮತ್ತು ಸಿಇಒ ವಿನುಕುಮಾರ್​ ಕೊಲೆ ಪ್ರಕರಣಕ್ಕೆ ಹೊಸ ತಿರುವು ಸಿಗುತ್ತಿದೆ. ಪೊಲೀಸರ ವಿಚಾರಣೆ ವೇಳೆ ಆರೋಪಿ ಫಿಲೆಕ್ಸ್ ಬಾಯ್ಬಿಟ್ಟಿದ್ದು, ಜೋಡಿ ಕೊಲೆ ಹಿಂದೆ ಜಿ-ನೆಟ್​​ ಕಂಪನಿ ಮಾಲೀಕ ಅರುಣ್​​​ ಕುಮಾರ್ ಕೈವಾಡ ಇದೆ ಎಂಬ ಶಂಕೆಯ ಮೇಲೆ ವಿಚಾರಣೆಗಾಗಿ ಅರುಣ್ ಕುಮಾರ್ ಬಂಧನವಾಗಿದೆ. 

ಈ ಮುಂಚೆ ಜಿ-ನೆಟ್ ಕಂಪನಿಯಲ್ಲಿ ಕೊಲೆಯಾದ ಫಣೀಂದ್ರ ಮತ್ತು ವಿನುಕುಮಾರ್​ ಕೆಲಸ ಮಾಡುತ್ತಿದ್ದರು. 7ನೇ ತರಗತಿ ಓದಿದ್ದ ಆರೋಪಿ ಶಬರೀಶ್​ ಅಲಿಯಾಸ್​ ಜೋಕರ್ ಫೆಲಿಕ್ಸ್  ಕೂಡಾ ಇದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.

ಅರುಣ್, ಫಣೀಂದ್ರ ನಡುವೆ ವೈಮನಸ್ಸು: ಬಳಿಕ ಫಣೀಂದ್ರ ಜಿ-ನೆಟ್ ಕಂಪನಿ ಬಿಟ್ಟು ಹೊಸ ಕಂಪನಿ ಆರಂಭಿಸಿದ್ದ. ಜಿ-ನೆಟ್​​ ಕಂಪನಿಯ ಹಲವು ನೌಕರರು ಫಣೀಂದ್ರ ಕಂಪನಿಗೆ ಸೇರಿದ್ದರು. ಇದರಿಂದ ಜಿ-ನೆಟ್​​ ಕಂಪನಿ ನಷ್ಟ ಸಿಲುಕಿದ್ದರಿಂದ ಅರುಣ್​ ಆಕ್ರೋಶಗೊಂಡಿದ್ದ. ಹೀಗಾಗಿ ಅರುಣ್, ಫಣೀಂದ್ರ ನಡುವೆ ವೈಮನಸ್ಸು ಉಂಟಾಗಿತ್ತು.

ಫಣೀಂದ್ರನನ್ನು ಮುಗಿಸುವ ಕೆಟ್ಟ ಆಲೋಚನೆ ಅರುಣ್ ತಲೆಯಲ್ಲಿ ಹೊಳೆಯಿತು. ಫಿಲೆಕ್ಸ್​​ ಜೊತೆ ಫಣೀಂದ್ರನನ್ನು ಮುಗಿಸುವ ಬಗ್ಗೆ ಚರ್ಚಿಸಿ ಸುಫಾರಿ ನೀಡಿದ್ದ. ಇದಕ್ಕೆ ಆರು ತಿಂಗಳ ಹಿಂದೆಯೇ ಪ್ಲಾನ್ ನಡೆದಿತ್ತು. ಪೊಲೀಸರು ನಿನ್ನೆ ವಿಚಾರಣೆ ನಡೆಸುವಾಗ ಜೋಕರ್ ಫೆಲಿಕ್ಸ್ ಬಾಯ್ಬಿಟ್ಟಿದ್ದಾನೆ. 

ಜೋಡಿ ಕೊಲೆ ಪ್ರಕರಣದಲ್ಲಿ ಶಿವಮೊಗ್ಗ ಮೂಲದ ಶಬರೀಶ್​ ಅಲಿಯಾಸ್​ ಫಿಲೆಕ್ಸ್, ಶಿವು ಮತ್ತು ಬೆಂಗಳೂರಿನ ರೂಪೇನ ಅಗ್ರಹಾರದ ವಿನಯ್​ ರೆಡ್ಡಿ ಈಗಾಗಲೇ ಬಂಧನವಾಗಿದೆ. 

Latest Indian news

Popular Stories