ವಿಜಯಪುರ : ಅನಾಧಿಕಾಲದಿಂದ ಭಾರತದಲ್ಲಿ ಕಾವ್ಯ ಸೃಷ್ಟಿಯಾಗಿದೆ ಮನುಷ್ಯನ ತಲ್ಲಣಗಳಿಗೆ ಧ್ವನಿಯಾಗಿರುವ ಕಾವ್ಯ ದಲಿತ ಸಾಹಿತ್ಯ ಹಾಗೂ ಕನ್ನಡ ಸಾಹಿತ್ಯ ತನ್ನ ಸತ್ವ ಕಳೆದುಕೊಂಡಾಗ ಪ್ರಸ್ತುತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದು ದಲಿತ ಬಂಡಾಯ ಕಾವ್ಯ ಎಂದು ಡಾ.ಲಿಂಗಣ್ಣ ಜಂಗಮರಹಳ್ಳಿ ಹೇಳಿದರು.
ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ನಡೆಯುತ್ತಿರುವ 10ನೇ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಸಾಮಾನ್ಯ ಕಾವ್ಯ ಹೆಣ್ಣು ಹೊನ್ನು ಮಣ್ಣಿನ ಸುತ್ತ ಗಿರಕಿ ಹೊಡೆಯುತ್ತದೆ. ದಲಿತ ಕಾವ್ಯ ಈ ನೆಲದ ನೈಜ್ಯ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುತ್ತವೆ. ಗ್ರಾಮೀಣ ಪ್ರದೇಶದಲ್ಲಿನ ಅಸ್ಪೃಶ್ಯತೆ ಆಚರಣೆಯೇ ಈ ದೇಶಕ್ಕೆ ಕಾಡುತ್ತಿರುವ ದೊಡ್ಡ ಭಯೋತ್ಪಾದನೆ ಆಗಿದೆ ನಮ್ಮ ವೈರಿಗಳು ದೇಶದ ಹೊರಗಿಲ್ಲ ದೇಶದ ಒಳಗೆ ಇದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.
ಈ ಸಂದರ್ಭದಲ್ಲಿ ಸರ್ವಾಧ್ಯಕ್ಷರಾದ ಪ್ರೊ ಎಚ್.ಟಿ.ಪೋತೆ, ಬೆಂಗಳೂರು ವಿ.ವಿ.ಪ್ರಾಧ್ಯಾಪಕ ಡಾ.ಕಾ.ವೆಂ ಶ್ರೀನಿವಾಸಮೂರ್ತಿ, ಡಾ.ಸುಭಾಷ್ ರಾಜಮಾನೆ, ಶಿವಮೊಗ್ಗ ಕುವೆಂಪು ವಿ.ವಿ.ಪ್ರಾಧ್ಯಾಪಕ ಡಾ.ನೆಲ್ಲಿಕಟ್ಟೆ ಸಿದ್ಧೇಶ್ , ಸಂಜಯ ಕಂಬಾಗಿ, ರಾಜ್ಯಾಧ್ಯಕ್ಷ ಡಾ.ಅರ್ಜುನ ಗೊಳಸಂಗಿ, ಖಂಜಾಂಚಿ ಡಾ.ಎಚ್.ಬಿ.ಕೋಲ್ಕಾರ, ಕಾರ್ಯದರ್ಶಿ ಸುಭಾಷ ಹುದ್ಲೂರು , ಉಪಾಧ್ಯಕ್ಷ ಡಾ.ವೈ.ಎಂ.ಭಜಂತ್ರಿ, ಸಂಯೋಜಕ ಬಸವರಾಜ ಜಾಲವಾದಿ, ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರ, ಸಹ ಸಂಯೋಜಕ ಉಮೇಶ ಶಿವಶರಣ, ದಸಾಪ ತಾಲೂಕಾ ಅಧ್ಯಕ್ಷೆ ಡಾ. ಪೂರ್ಣಿಮಾ ಧಾಮಣ್ಣನವರ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ, ಡಾ.ಭುವನೇಶ್ವರಿ, ಡಾ.ಶಶಿಕಲಾ ರಾಠೋಡ, ಮಂಜುಳಾ ಗದ್ದಿ ಉಪಸ್ಥಿತರಿದ್ದರು.