ಜನರ ಹಕ್ಕನ್ನು ಖಚಿತಪಡಿಸುವ ಉಚಿತ ಯೋಜನೆಗಳು ಬಿಟ್ಟಿಯಲ್ಲ – ಡಾ. ಹೆಚ್ ವಿ ವಾಸು

ಉಡುಪಿ : ತಮಿಳುನಾಡಿನಲ್ಲಿ ಸರ್ಕಾರ ಅತಿ ಹೆಚ್ಚು ಮಹಿಳೆಯರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ ಅಲ್ಲಿಯ ಜನರು ಎಷ್ಟು ಮಂದಿ ಸೋಮಾರಿಗಳಾಗಿದ್ದಾರೆ? ಉಚಿತ ಯೋಜನೆಗಳನ್ನು ನೀಡುವುದರಿಂದ ಜನರು ಸೋಮಾರಿಗಳಾಗುತ್ತಿದ್ದಾರೆ ಎಂಬುದು ಶುದ್ಧ ಸುಳ್ಳು ಅದೇ ರೀತಿ ದೇಶ ದಿವಾಳಿ ಆಗುತ್ತದೆ ಎಂಬುದು ಕೂಡ ಸುಳ್ಳು ಇಂತಹ‌ ಸುಳ್ಳುಗಳನ್ನು ವ್ಯವಸ್ಥಿತವಾಗಿ ಪ್ರಚಾರ ಮಾಡಲಾಗುತ್ತಿದೆ. ಈಗಾಗಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಉಚಿತ ಯೋಜನೆಗಳನ್ನು ಜಾರಿ ಮಾಡುತ್ತಿದೆ ಅದರ ಬೆನ್ನಿಗೆ ವಿರೋಧ ಪಕ್ಷಗಳು ಉಚಿತ ಯೋಜನೆಗಳಿಂದ ದೇಶ ದಿವಾಳಿ ಆಗುತ್ತದೆ ಎಂದು ಹೇಳುತ್ತಿದೆ ಆದರೆ ರಾಜ್ಯ ಸರ್ಕಾರದ ಉಚಿತ ಯೋಜನೆಗಳಿಂದ ನಿಜವಾಗಿಯೂ ದೇಶ ದಿವಾಳಿ ಆಗುತ್ತಾ ಎಂಬುದನ್ನು ತಿಳಿಯಲು ಅರ್ಥಶಾಸ್ತ್ರರು ಏನು ಈ ಉಚಿತ ಯೋಜನೆಗಳ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ತಿಳಿದ ನಂತರ ಅದರ ಬಗ್ಗೆ ಮಾತನಾಡಬೇಕೆ‌ ಹೊರತು ವಾಟ್ಸಪ್ ನಲ್ಲಿ ಬಂದ ಸುಳ್ಳು ಸುದ್ದಿಗಳಿಂದಲ್ಲ ಎಂದು ಈದಿನ.ಕಾಮ್ ನ ಮುಖ್ಯಸ್ಥರಾದ ಡಾ. ಹೆಚ್ ವಿ ವಾಸು ಹೇಳಿದರು.

ಇವರು ಇಂದು ಸಹಬಾಳ್ವೆ ಉಡುಪಿ ಮತ್ತು ಈದಿನ ಸಹಯೋಗದೊಂದಿಗೆ ನಡೆದ ಜನರ ಹಕ್ಕುನ್ನು ಖಚಿತಪಡಿಸುವ ಉಚಿತ ಯೋಜನೆಗಳು ಬಿಟ್ಟಿಯಲ್ಲ ಎಂಬ ವಿಷಯದಲ್ಲಿ ಸಂವಾದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಹಬಾಳ್ವೆ ಸಂಚಾಲಕ ಪ್ರಶಾಂತ್ ಜತ್ತನ್ನ ಮಾತನಾಡಿ ಸರ್ಕಾರದ ಎಲ್ಲಾ ಯೋಜನೆಗಳು ಬಡವರ ಪರವಾಗಿದ್ದು ಅದನ್ನು ಅರ್ಹ ಬಡವರಿಗೆ ತಲುಪಬೇಕು ಆಗ ಮಾತ್ರ ರಾಜ್ಯ ಸರ್ಕಾರದ ಯೋಜನೆಗಳು ಸರಿಯಾದ ರೀತಿಯಲ್ಲಿ ಪ್ರಯೋಜನಕಾರಿ ಆಗುತ್ತದೆ ಎಂದು ಹೇಳಿದರು.

ಈದಿನ.ಕಾಮ್ ನ ಉಮರ್ ಯು ಹೆಚ್ ಚುನಾವಣೆ ಸಂದರ್ಭದಲ್ಲಿ ಈದಿನ.ಕಾಮ್ ನಡೆಸಿದರ ಸಮೀಕ್ಷೆ ಬಗ್ಗೆ ವಿವರವಾಗಿ ಮಾಹಿತಿ ಹಂಚಿಕೊಂಡರು. ಪಂಚಾಯತ್ ರಾಜ್ ನ ತರಭೇತಿದಾರ ಜಯಂತ್ ರಾವ್ ಸಹಬಾಳ್ವೆ ಉಡುಪಿಯ ವಿರೋನಿಕ ಕರ್ನೇಲಿಯೋ, ಯಾಸೀನ್ ಮಲ್ಪೆ, ನಾಗೇಶ್ ಉದ್ಯಾವರ್, ಫಾದರ್ ವಿಲಿಯಂ ಮಾರ್ಟಿಸ್, ಹುಸೇನ್ ಕೋಡಿಬೆಂಗ್ರೆ, ಅಜೀಝ್ ಉದ್ಯಾವರ್ ಉಪಸ್ಥಿತರಿದ್ದರು.

Latest Indian news

Popular Stories