Featured StoryShivamoggaState News

ಹೊಡೆದರೆ ವಾಪಸು ಹೊಡೆಯಿರಿ ಎಂದದ್ದು ತಪ್ಪಲ್ಲಾ – ಈಶ್ವರಪ್ಪ ಸಮರ್ಥನೆ!

ಶಿವಮೊಗ್ಗ: ಬಿಜೆಪಿ ಕಾರ್ಯಕರ್ತರನ್ನು ಮುಟ್ಟಿದರೆ ಸುಮ್ಮನಿರೆವು ಎಂದು ರವಿವಾರ ಹೇಳಿಕೆ ನೀಡಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಇಂದು ತಮ್ಮ ಹೇಳಿಕೆ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದು ಹೊಡೆದರೆ ವಾಪಸು ಹೊಡೆಯಿರಿ ಎಂದು ಹೇಳಿದ್ದು ತಪ್ಪಾ ಎಂದು ಪ್ರಶ್ನಿಸಿದ್ದಾರೆ.

ನಾನು ತುಂಬಾ ಸ್ಪಷ್ಟವಾಗಿ ಕಾರ್ಯಕರ್ತರಿಗೆ ಈಗಲೂ ಹೇಳುತ್ತಿದ್ದೇನೆ. ಒಂದು ಕಾಲದಲ್ಲಿ ಬಿಜೆಪಿಗೆ ಶಕ್ತಿ ಇರಲಿಲ್ಲ. ಉದಾಹರಣೆಗೆ ಕೇರಳದ ಬಗ್ಗೆ ಹೇಳಿದ್ದೆ. ರಾಷ್ಟ್ರೀಯ ಜನಸಂಘದ ಅಧ್ಯಕ್ಷ ದೀನದಯಾಳ್ ಉಪಾಧ್ಯಾಯ ಅವರನ್ನು ಕೊಲೆ ಮಾಡಿ, ಬಿಸಾಕಿ ಹೋಗಿದ್ದರು. ಅದರ ಬಗ್ಗೆ ನಮಗೆ ನೋವಿದೆ. ಅವಾಗ ನಮಗೆ ಶಕ್ತಿ ಇರಲಿಲ್ಲ. ಯಾರು ಹೊಡೆದರೂ ಯಾಕೆ ಕೊಲೆ ಮಾಡಿದರು ಎಂದು ತಿಳಿದುಕೊಳ್ಳುವ ಶಕ್ತಿಯೇ ಇರಲಿಲ್ಲ. ಕೇರಳದಲ್ಲಿ ಆರ್ ಎಸ್ಎಸ್ ಶಾಖೆ ಮಾಡುತ್ತಿದ್ದರೆ ಯುವಕರನ್ನು ಕೊಂದು ಹಾಕುತ್ತಿದ್ದರು. ಯಾರು ಹೇಳೋರು ಕೇಳೋರು ಇರಲಿಲ್ಲ‌‌. ಅದರೆ ಈಗ ಆ ಪರಿಸ್ಥಿತಿ ಇಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.

ನಾವಾಗಿಯೇ ನಾವೇ ಯಾರನ್ನು ಮುಟ್ಟಲು ಹೋಗಲ್ಲ. ಯಾರ ಸುದ್ದಿಗೂ ಹೋಗಲ್ಲ. ಎಂತಹ ಸ್ಥಿತಿ ಬಂದರೂ ಶಾಂತವಾಗಿರಿ ಎಂದು ಹಿರಿಯರು ಹೇಳಿದ್ದರು. ಶಕ್ತಿ ಬಂದಮೇಲೆ ಹಿರಿಯರು ‘ಫೇಸ್ ವಿತ್ ದಿ ಸೇಮ್ ಸ್ಟಿಕ್’ ಎಂದು ಹೇಳಿದ್ದಾರೆ. ಇದು ನಾನು ಹೇಳಿದ್ದಲ್ಲ. ಹಿರಿಯರು ಹೇಳಿದ್ದನ್ನು ಮತ್ತೆ ಹೇಳಿರುವುದು ಎಂದರು.

ಬದಲಾಗಿ ಒದ್ದರೂ ಒದೆಸಿಕೊಂಡಿರಿ, ಕೊಲೆ ಮಾಡಿದರೆ ಸುಮ್ಮನೀರಿ ಎನ್ನಲೇ‌? ಉಡುಪಿಯಲ್ಲಿ ಕೊಟ್ಟಿಗೆಯಲ್ಲಿದ್ದ ಕರು ಕದ್ದುಕೊಂಡು ಹೋಗೋದ್ದನ್ನು ಕೇಳಿದ್ದಕ್ಕೆ ಕೊಲೆ ಮಾಡಿದ್ದರು. ಆ ಸಂದರ್ಭದಲ್ಲಿ ಕಂಪ್ಲೇಂಟ್ ಕೊಟ್ಟಿದ್ದರೂ ಕೂಡ ತೆಗೆದುಕೊಂಡಿರಲಿಲ್ಲ. ಸಿದ್ದರಾಮಯ್ಯನವರ ಸರ್ಕಾರ ಇದ್ದಾಗ ಕೇಳಿದರೆ ಕೋಮುವಾದಿಗಳನ್ನು ಬಗ್ಗು ಬಡಿತೀವಿ ಎಂದಿದ್ದರು. ಗೋ ಕಳ್ಳತನ ತಡೆಯಲು ಹೋದ ಯುವಕರನ್ನೇ ಕೊಂದರು‌. ಸರ್ಕಾರ ಕೊಲೆ ಮಾಡಿದವರ ಪರವಾಗಿ ಹೋಯ್ತು. ಗೋಮಾತೆ ಶಾಪದಿಂದ ಸಿಎಂ ಸ್ಥಾನ ಹೊಯ್ತು. ಸರ್ಕಾರನೂ ಹೋಯ್ತು ಎಂದು ಹೇಳಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button