ಹೊಸದಿಲ್ಲಿ: ಖಾತೆಯಲ್ಲಿ ಅಗತ್ಯ ಮೊತ್ತ ಇದ್ದರೂ ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ಪೂರ್ಣಗೊಳಿಸದ ಫಾಸ್ಟಾಗ್‌ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಎಚ್ಚರಿಸಿದೆ.
ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸದೆ ಇದ್ದರೆ ಬ್ಯಾಂಕ್ ಕಡೆಯಿಂದ ಫಾಸ್ಟ್ಯಾಗ್ ಖಾತೆಗಳು ಜ. 31ರಿಂದ ನಿಷ್ಕ್ರಿಯವಾಗಲಿವೆ ಎಂದು ಎನ್‌ಎಚ್‌ಎಐ ತಿಳಿಸಿದೆ. ಎಲೆಕ್ಟ್ರಾನಿಕ್ ಟೋಲ್ ವ್ಯವಸ್ಥೆಯನ್ನು ಸುಗಮಗೊಳಿಸಲು ಮತ್ತು ತಡೆರಹಿತ ಸೇವೆ ಒದಗಿಸಲು “ಒಂದು ವಾಹನ, ಒಂದು ಫಾಸ್ಟಾಗ್’ ಎಂಬ ಉಪಕ್ರಮವನ್ನು ಜಾರಿಗೊಳಿಸಲಾಗಿದೆ. ಇದನ್ನು ಎಲ್ಲರೂ ಪಾಲಿಸಬೇಕು. ಹಲವು ವಾಹನಗಳಿಗೆ ಒಂದೇ ಫಾಸ್ಟ್ಯಾಗ್ ಹೊಂದುವುದು ಅಥವಾ ಒಂದೇ ವಾಹನಕ್ಕೆ ಹಲವು ಫಾಸ್ಟ್ಯಾಗ್ ಇರುವುದನ್ನು ಇದು ತಪ್ಪಿಸುತ್ತದೆ ಎಂದು ಎನ್‌ಎಚ್‌ಎಐ ಸೂಚಿಸಿದೆ.