ಮಂಗಳೂರು, ಜ.15: ಕೆಲಸಕ್ಕೆ ವರದಿ ಮಾಡಲೆಂದು ಹೋದ ಹೆಡ್ ಕಾನ್‌ಸ್ಟೇಬಲ್ ನಾಪತ್ತೆಯಾಗಿರುವುದಾಗಿ ಕಂಕನಾಡಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಂಕನಾಡಿ ನಗರ ಠಾಣೆಯಲ್ಲಿ ಹೆಡ್‌ಕಾನ್‌ಸ್ಟೇಬಲ್ ಆಗಿದ್ದ ಮಂಜುನಾಥ ಹೆಗ್ಡೆ (41) ನಾಪತ್ತೆಯಾದವರು.
ಅವರನ್ನು ಮಂಗಳೂರು ನಗರ ಸಿಸಿಆರ್‌ಬಿ ಘಟಕಕ್ಕೆ ಒಒಡಿ ನೆಲೆಯಲ್ಲಿ ವರ್ಗಾವಣೆಗೊಳಿಸಲಾಗಿತ್ತು. ಜ.13ರಂದು ಅಲ್ಲಿ ಕೆಲಸಕ್ಕೆ ವರದಿ ಮಾಡಲು ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆಂದು ಕುಟುಂಬಸ್ಥರು ತಿಳಿಸಿದ್ದಾರೆ. ಮಂಜುನಾಥ್‌ರ ಮೊಬೈಲ್ ಸ್ವಿಚ್ ಆ್ ಆಗಿದೆ ಎಂದು ತಿಳಿದು ಬಂದಿದೆ