“ಸೌಜನ್ಯಳಿಗೆ ಆದ ಗತಿಯೇ ನಿನ್ನ ಮಗಳಿಗೆ ಆಗುತ್ತೆ” ಎಂದು ಹೇಳಿದ ಆರೋಪ – ಮಹೇಶ್ ವಿಕ್ರಮ್ ಹೆಗಡೆ ವಿರುದ್ಧ ಎಫ್.ಐ.ಆರ್

ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೋರ್ವರಿಗೆ ಬೆದರಿಕೆ ಮಾನಹಾನಿಕಾರ ಕಾಮೆಂಟ್ ಹಾಕಿದ ಆರೋಪ ಹಿನ್ನೆಲೆ ಹಿಂದು ಮುಖಂಡ ಮಹೇಶ್ ವಿಕ್ರಮ್ ಹೆಗಡೆ ವಿರುದ್ಧ ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

FIR COPY MAHESH VIKRAM HEGDE Featured Story, State News

ದೂರುದಾರ ಸುರೇಶ್ ಬಾಬು ಮತ್ತು ಆತನ ಮಗಳ ಬಗ್ಗೆ ವಿಕ್ರಮ್ ಹೆಗಡೆ ಟಿವಿ ವಿಕ್ರಮ್ ಅಧಿಕೃತ ಪೇಜ್‌ನಲ್ಲಿ ಮಾನಹಾನಿಯಾಗುವ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಹೀಗಾಗಿ ಆರೋಪಿ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ದೂರದಾರ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.

ದೂರುದಾರರಿಗೆ ಕರೆ ಮಾಡಿರುವ ಮಹೇಶ್ ವಿಕ್ರಮ್ ಹೆಗಡೆ, ನಾವು ಸೌಜನ್ಯಳನ್ನೇ ಬಿಟ್ಟಿಲ್ಲ.ಅಂತಹ ಕಟೀಲ್ ಕೈನಲ್ಲೂ ಏನೂ ಮಾಡಲು ಆಗಿಲ್ಲ. ಇನ್ನು ನೀನು ಏನ್ ಕಿತ್ಕೊಳ್ತಿಯಾ? ಎಂದು ಬೆದರಿಕೆ ಹಾಕಿದ್ದಲ್ಲದೇ, ಕೇಂದ್ರ ಸರ್ಕಾರ ನಮ್ಮ ಕೈಯಲ್ಲಿದೆ ಸೌಜನ್ಯಳಿಗೆ ಆದ ಗತಿಯೇ ನಿನ್ನ ಮಗಳಿಗೆ ಆಗುತ್ತೆ ಎಂಬ ರೀತಿ ದೂರುದಾರರಿಗೆ ಬೆದರಿಕೆಯೊಡ್ಡಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಆರೋಪಿ ವಿರುದ್ಧ ಸೂಕ್ತ ಕ್ರಮಕ್ಕೆ ದೂರುದಾರ ಸುರೇಶ ಬಾಬು ಎಂಬುವವರಿಂದ ದೂರು ದಾಖಲು ಮಾಡಲಾಗಿದೆ.

Latest Indian news

Popular Stories