ಚೈತ್ರಾ ವಂಚನೆ ಪ್ರಕರಣ ಮಾಧ್ಯಮದಲ್ಲಿ ಬರುವುದಕ್ಕೆ ಮುನ್ನವೇ ನನಗೆ ಗೊತ್ತಿತ್ತು; ಸಿಟಿ ರವಿಯವರೊಂದಿಗೆ ಚರ್ಚಿಸಿದ್ದೆ – ಚಕ್ರವರ್ತಿ ಸೂಲಿಬೆಲೆ

ಬೆಂಗಳೂರು: ಚೈತ್ರಾ ಕುಂದಾಪುರ ಪ್ರಕರಣದಲ್ಲಿ (Chaitra Kundapura case) ನನ್ನ ಮೇಲೂ ಆರೋಪಗಳು ಇದ್ದರೆ ನನ್ನ ಮೇಲೂ ತನಿಖೆ (investigation) ನಡೆಸಿ ಅಂತ ನಮೋ ಬ್ರಿಗೇಡ್ (Namo Brigade) ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ (chakravarthy sulibele) ಹೇಳಿದ್ದಾರೆ.

ಪೊಲೀಸರ ತನಿಖೆಗೆ (police investigation) ನಾನು ಸಂಪೂರ್ಣ ಸಹಕಾರ ನೀಡುತ್ತೇನೆ ಅಂತ ಚಕ್ರವರ್ತಿ ಸೂಲಿಬೆಲೆ ಸ್ಪಷ್ಟ ಪಡಿಸಿದ್ದಾರೆ.

ನ್ಯೂಸ್ 18 ಕನ್ನಡ ವಾಹಿನಿ ಜೊತೆ ಮಾತನಾಡಿದ ಅವರು, “ಪ್ರಕರಣದಲ್ಲಿ ನನ್ನ ಹೆಸರು ನೇರವಾಗಿ ಬಂದಿಲ್ಲ. ಆದರೆ ಸ್ವಾಮೀಜಿ ಈ ವಿಚಾರವನ್ನು ನನ್ನ ಬಳಿ ಪ್ರಸ್ತಾಪ ಮಾಡಿದ್ದೇನೆ ಎಂದಿದ್ದಾರೆ. ಆದರೆ ನನ್ನ ತಪ್ಪಿದ್ದರೆ ತನಿಖೆ ಆಗಲಿ” ಅಂತ ಅವರು ಹೇಳಿದ್ದಾರೆ.

ಚೈತ್ರಾ ಕುಂದಾಪುರ ಜೊತೆ ಯಾವುದೇ ಸಂಪರ್ಕ ಇರಲಿಲ್ಲ. ಚೈತ್ರಾ ಕುಂದಾಪುರ ಅವರನ್ನು ಸುಮಾರು 10 ವರ್ಷಗಳ ಹಿಂದೆ ನೋಡಿದ್ದೆ ಅಂತ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ. ಅವರು ಮಂಗಳೂರಿನ ಖಾಸಗಿ ಟಿವಿಯೊಂದರಲ್ಲಿ ವರದಿಗಾರರಾಗಿದ್ರು. ಆಗ ನಾನು 45 ನಿಮಿಷಗಳ ಕಾಲ ಸಂದರ್ಶನದಲ್ಲಿ ಅವರೊಂದಿಗೆ ಮಾತನಾಡಿದ್ದೆ. ಆಗಷ್ಟೇ ನಾನು ಭೇಟಿಯಾಗಿದ್ದು, ಆನಂತರ ಕಾರ್ಯಕ್ರಮಗಳಲ್ಲಿ ಭಾಗಿಯಾದ್ರೂ, ಅವರೊಂದಿಗೆ ನನಗೆ ಹೆಚ್ಚಿನ ಸಂಪರ್ಕ ಇರಲಿಲ್ಲ ಅಂತ ಸೂಲಿಬೆಲೆ ಹೇಳಿದ್ದಾರೆ.

ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಈ ಪ್ರಕರಣ ಮಾಧ್ಯಮಗಳಲ್ಲಿ ಬರುವುದಕ್ಕೂ ‌ಮುನ್ನವೇ ನನಗೆ ಗೊತ್ತು. ವಜ್ರದೇಹಿ ರಾಜಶೇಕರಾನಂದ ಸ್ವಾಮೀಜಿಗಳು ನನ್ನ ಬಳಿ‌ ಹೇಳಿದ್ದರು. ವಂಚನೆಗೆ ಒಳಗಾದ ಉದ್ಯಮಿ ಗೋವಿಂದ ಬಾಬು ಪೂಜಾರಿ ನನಗೂ ಆತ್ಮೀಯರು. ಆದರೆ, ವಂಚನೆ‌ ಬಗ್ಗೆ ನನಗೆ ಯಾವುದೇ ಮಾಹಿತಿ‌ ನೀಡಲಿಲ್ಲ. ಅವರ ಬಗ್ಗೆ ನನಗೆ ಬಹಳ‌ ಅನುಕಂಪವಿದೆ ಎಂದು ಹೇಳಿದರು.

ಬಿಜೆಪಿಯಲ್ಲಿ ಈ ರೀತಿ ಹಣ ಕೊಟ್ಟ ಟಿಕೆಟ್ ಪಡೆಯುವ ಸಂಸ್ಕೃತಿ ಇಲ್ಲ. ಈ ವಿಚಾರವನ್ನು ನಾನು ಸಿ.ಟಿ. ರವಿ ಅವರ ಜತೆ ಚರ್ಚೆ ಮಾಡಿದೆ. ಅದಾದ ನಂತರ ಸಾಕಷ್ಟು ಸಂಧಾನ ಮಾತುಕತೆ ನಡದರೂ ಪ್ರಯೋಜನ‌ ಆಗಿಲ್ಲ. ಬಳಿಕ ಅವರಾಗಿಯೇ ಬೀದಿಗೆ ಬರಲಿ ಎಂದು ಸಿ.ಟಿ. ರವಿ ಹೇಳಿದ್ದರು. ಪಡೆದ ಹಣವನ್ನು ಚೈತ್ರಾ ಕುಂದಾಪುರ ಕೊಡಲು ಒಪ್ಪದೇ ಇದ್ದಾಗ ಅನಿವಾರ್ಯವಾಗಿ ಮಾಧ್ಯಮಗಳ ಮುಂದೆ ಬರಬೇಕಾಯ್ತು ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.

Latest Indian news

Popular Stories