145ಕ್ಕೂ ಹೆಚ್ಚು ಮಂದಿ ಮೃತ್ಯು, ಉತ್ತರಾಖಂಡ, ಹರಿಯಾಣದಲ್ಲಿ ಭಾರೀ ಮಳೆ ಎಚ್ಚರಿಕೆ

ನವದೆಹಲಿ: ಉತ್ತರ ಭಾರತ(North India) ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಮಳೆಯ ಅಬ್ಬರ ಜೋರಾಗಿದ್ದು ಅದರಂತೆ ದೇಶದಲ್ಲಿ ಮಳೆ ಪ್ರಾರಂಭವಾದಾಗಿನಿಂದ ಇದುವರೆಗೂ 145 ಕ್ಕೂ ಹೆಚ್ಚು ಜನರು ಮಳೆ ಸಂಬಂಧಿತ ಘಟನೆಗಳಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಹಿಮಾಚಲ ಪ್ರದೇಶ (Himachal Pradesh) ಮತ್ತು ಉತ್ತರಾಖಂಡ್ ಗುಡ್ಡಗಾಡು ರಾಜ್ಯಗಳಲ್ಲಿ ಪ್ರವಾಹ ಮತ್ತು ಭೂಕುಸಿತಗಳು ಮತ್ತೆ ಮುಂದುವರಿದಿದ್ದು, ಹಲವಾರು ಪ್ರವಾಸಿಗರು ಸಿಕ್ಕಿಹಾಕಿಕೊಂಡಿದ್ದಾರೆ ಎನ್ನಲಾಗಿದೆ.

ಮಳೆ ಪ್ರಾರಂಭವಾದಾಗಿನಿಂದ ಹಿಮಾಚಲ ಪ್ರದೇಶದಲ್ಲಿ 91 ಮಂದಿ ಮೃತಪಟ್ಟಿದ್ದರೆ, ಉತ್ತರ ಪ್ರದೇಶದಲ್ಲಿ 14, ಹರಿಯಾಣದಲ್ಲಿ 16, ಪಂಜಾಬ್‌ನಲ್ಲಿ 11 ಮತ್ತು ಉತ್ತರಾಖಂಡದಲ್ಲಿ 16 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಉತ್ತರಾಖಂಡ್ ಮತ್ತು ಹರಿಯಾಣದಲ್ಲಿ ಇಂದೂ ಕೂಡ ಗುಡುಗು ಸಹಿತ ಭಾರಿ ಮಳೆಯಾಗುವ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ದೆಹಲಿಯ ಯಮುನಾ ನದಿಯಲ್ಲಿ (Yamuna River) ನೀರಿನ ಮಟ್ಟ ಏರಿಕೆಯಾದ ಹಿನ್ನೆಲೆಯಲ್ಲಿ ಹಲವಾರು ಸ್ಥಳಗಳಲ್ಲಿ ಪ್ರವಾಹ ಉಂಟಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ದೆಹಲಿಯ ಶಾಲಾ ಕಾಲೇಜುಗಳಿಗೆ ಎರಡು ದಿನಗಳ ಕಾಲ ರಜೆ ಘೋಷಿಸಲಾಗಿದ್ದು, ಅಷ್ಟು ಮಾತ್ರವಲ್ಲದೆ ಜುಲೈ 14 ರವರೆಗೆ ಕೆಂಪು ಕೋಟೆಯನ್ನು ಪ್ರವಾಸಿಗರಿಗೆ ಮುಚ್ಚಲಾಗಿದೆ.

Latest Indian news

Popular Stories