19 ಕೆಜಿ ಮತ್ತು 5 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ ಅಲ್ಪ ಇಳಿಕೆ

ಹೊಸ ದಿಲ್ಲಿ: ಪೆಟ್ರೋಲ್, ಡೀಸೆಲ್ ದರದಲ್ಲಿ ಸಣ್ಣ ಪ್ರಮಾಣದ ಇಳಿಕೆ ಕಂಡಿದ್ದ ಗ್ರಾಹಕರಿಗೆ ಇದೀಗ ಮತ್ತೊಂದು ಅಲ್ಪ ರಿಲೀಫ್ ಸಿಕ್ಕಿದೆ. ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ. 19 ಕೆ. ಜಿ. ತೂಕದ ವಾಣಿಜ್ಯ ಬಳಕೆಯ ಸಿಲಿಂಡರ್ ದರ ಹಾಗೂ 5 ಕೆ. ಜಿ. ತೂಕದ ಮುಕ್ತ ಮಾರಾಟ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು ತೈಲ ಮಾರಾಟ ಕಂಪನಿಗಳು ಅಲ್ಪ ಪ್ರಮಾಣದಲ್ಲಿ ಇಳಿಕೆ ಮಾಡಿವೆ ಎಂಬ ಮಾಹಿತಿ ಲಭ್ಯವಾಗಿದೆ.

19 ಕೆ. ಜಿ. ತೂಕದ ವಾಣಿಜ್ಯ ಬಳಕೆಯ ಪ್ರತಿ ಸಿಲಿಂಡರ್ ದರದಲ್ಲಿ 30.50 ರೂಪಾಯಿ ಕಡಿತ ಮಾಡಲಾಗಿದೆ. ಇದೇ ವೇಳೆ, 5 ಕೆ. ಜಿ. ಎಲ್‌ಪಿಜಿ ಸಿಲಿಂಡರ್ ದರದಲ್ಲಿ 7.50 ರೂಪಾಯಿ ಕಡಿತ ಮಾಡಲಾಗಿದೆ. ಏಪ್ರಿಲ್‌ 1 ರಿಂದಲೇ ಈ ದರ ಕಡಿತ ಅನ್ವಯ ಆಗಲಿದೆ. ವಾಣಿಜ್ಯ ಬಳಕೆ ಸಿಲಿಂಡರ್ ದರ ಕಡಿತ ಆಗಿರುವ ಹಿನ್ನೆಲೆಯಲ್ಲಿ 19 ಕೆ. ಜಿ. ತೂಕದ ವಾಣಿಜ್ಯ ಬಳಕೆಯ ಸಿಲಿಂಡರ್ ದರ ದಿಲ್ಲಿಯಲ್ಲಿ 1,764.50 ರೂ. ಗೆ ಇಳಿಕೆಯಾಗಿದೆ.
ಕಳೆದ ಮಾರ್ಚ್ 1 ರಂದು ತೈಲ ಮಾರಾಟ ಕಂಪನಿಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಏರಿಕೆ ಮಾಡಿದ್ದವು. ಇದೀಗ ಏಪ್ರಿಲ್ 1 ರಂದು ಅಲ್ಪ ಪ್ರಮಾಣದ ಇಳಿಕೆ ಮಾಡಿವೆ. ಮಾರುಕಟ್ಟೆಯ ಏರಿಳಿತಗಳಿಗೆ ತಕ್ಕಂತೆ ಈ ದರ ಬದಲಾವಣೆ ಮಾಡಲಾಗಿದೆ ಎಂದು ಎಂದು ಕಂಪನಿಗಳು ಹೇಳಿವೆ. ಲೋಕಸಭಾ ಚುನಾವಣೆ ಹೊತ್ತಲ್ಲೇ ದರ ಕಡಿತ ಆಗಿರೋದು ಜನರಿಗೆ ಕೊಂಚ ರಿಲೀಫ್ ಮೂಡಿಸಿದೆ.

Latest Indian news

Popular Stories