‘ಶಾಹೀನ್’ ವಿದ್ಯಾರ್ಥಿನಿಗೆ ಚಿನ್ನದ ಪದಕ ಪ್ರದಾನ

ಬಿ.ಎಸ್ಸಿ ಕೆಮಿಸ್ಟ್ರಿ ಪರೀಕ್ಷೆಯಲ್ಲಿ ಸಾಧನೆಗೈದ ಬೀದರ್‍ನ ಶಾಹೀನ್ ಮಹಿಳಾ ಪದವಿ ಕಾಲೇಜು ವಿದ್ಯಾರ್ಥಿನಿ ಸಿಮನ್ ಬಾನು ಡಿ.ಯು. ಅವರಿಗೆ ವಿಜಯಪುರದಲ್ಲಿ ನಡೆದ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಚಿನ್ನದ ಪದಕ ಪ್ರದಾನ ಮಾಡಿದರು.

ಬೀದರ್: ಪ್ರಸಕ್ತ ಸಾಲಿನ ಬಿ.ಎಸ್ಸಿ ಕೆಮಿಸ್ಟ್ರಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಇಲ್ಲಿಯ ಶಾಹೀನ್ ಮಹಿಳಾ ಪದವಿ ಕಾಲೇಜು ವಿದ್ಯಾರ್ಥಿನಿ ಸಿಮನ್ ಬಾನು ಡಿ.ಯು. ಅವರಿಗೆ ವಿಜಯಪುರದ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಚಿನ್ನದ ಪದಕ ಪ್ರದಾನ ಮಾಡಿದೆ.

ಕೆಮಿಸ್ಟ್ರಿ ವಿಷಯದಲ್ಲಿ ಶೇ 90.7 ರಷ್ಟು ಅಂಕ ಗಳಿಸಿ ಸಾಧನೆಗೈದ ವಿದ್ಯಾರ್ಥಿನಿಗೆ ವಿಶ್ವವಿದ್ಯಾಲಯದಲ್ಲಿ ನಡೆದ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ‘ಗೌತಮ ಮೆಹ್ತಾ ಸಿಂಧನೂರು’ ಚಿನ್ನದ ಪದಕ ಪ್ರದಾನ ಮಾಡಿದರು.

Latest Indian news

Popular Stories