ಜುಲೈ 4 ರಿಂದ ಕರಾವಳಿ ಜಿಲ್ಲೆಗಳಿಗೆ ಮತ್ತೆ ಭಾರೀ ಮಳೆ: ಆರೆಂಜ್ ಅಲರ್ಟ್

ಬೆಂಗಳೂರು: ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿಗೆ ಭಾರೀ ಮಳೆಯಾಗುತ್ತಿದ್ದು, ಜುಲೈ ನಾಲ್ಕರಿಂದ ಮಳೆಯ ಪ್ರಮಾಣ ಇನ್ನೂ ಹೆಚ್ಚಾಗಲಿದೆ. ಆರೆಂಜ್ ಅಲರ್ಟ್ ನೀಡಿ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಆದರೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಮಳೆಗಾಲದಲ್ಲಿಯೂ ಮಳೆಯ ಕೊರತೆ ಆಗಿದೆ. ಮಳೆಯ ಪ್ರಮಾಣ ತೀವ್ರ ಕುಸಿದಿದೆ. ಹಳ್ಳ, ನದಿ ಜಲಾಶಯಗಳು ಇನ್ನೂ ತುಂಬಿಲ್ಲ. ಇದರಿಂದ ರೈತರು ಆಕಾಶದತ್ತ ಮುಖ ನೋಡುವಂತೆ ಆಗಿದೆ.

ಬಾಗಲಕೋಟೆ, ಬೀದರ್, ಬೆಳಗಾವಿ, ಕಲಬುರಗಿ, ರಾಯಚೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಜುಲೈ 5 ರಂದು ಸಾಧಾರಣ ಮಳೆ ಆಗಲಿದ್ದು ಯೆಲ್ಲೋ ಅಲರ್ಟ್ ಕೊಡಲಾಗಿದೆ.

ಇನ್ನು ಬೆಂಗಳೂರಲ್ಲಿ ಜುಲೈ 1 ರಂದು ಮೋಡ ಕವಿದ ವಾತಾವರಣ ಇದೆ. ಹಗುರ ಮಳೆಯಾಗುವ ಸಾಧ್ಯತೆಯೂ ಇದೆ. ಜುಲೈ ಮೊದಲನೇ ವಾರ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Latest Indian news

Popular Stories