ಕನ್ನಡಿಗರಿಗೆ ಉದ್ಯೋಗ : ಆದೇಶ ಹೊರಡಿಸಲು ಸರ್ಕಾರಕ್ಕೆ ಮನವಿ

ಕಾರವಾರ : ಹೊರ ರಾಜ್ಯಗಳಿಂದ ಬಂದು ಕರ್ನಾಟಕದಲ್ಲಿ ಕೈಗಾ ಸ್ಥಾಪಿಸುವ ಉದ್ಯಮಿಗಳು ಕನ್ನಡಿಗರಿಗೆ ಶೇ.50 ರಷ್ಟು ಉದ್ಯೋಗ ಮೀಸಲಿಡಬೇಕೆಂಬ ಆದೇಶ ಹೊರಡಿಸುವಂತೆ ವಿನಂತಿಸಿ ರಾಜ್ಯ ಸರ್ಕಾರಕ್ಕೆ ಕಾರವಾರ ತಾಲೂಕು ಕರವೇ ಮನವಿ ಮಾಡಿತು.
ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ನೀಡಿದ ಕರವೇ , ಈಚೆಗೆ ಕಾರ್ಪೊರೇಟ್ ಕಂಪನಿಗಳ ಸಿಇಒ ಮತ್ತು ಯುವ ಉದ್ಯೋಗಿಗಳನ್ನು ಸಹ ಉದ್ಯಮಿಗಳು ತಮ್ಮ ರಾಜ್ಯ ದಿಂದ ತರುತ್ತಾರೆ. ಇದು ಕನ್ನಡಿಗ ಯುವಕ ಯುವತಿಯರಿಗೆ ಉದ್ಯೋಗ ನೀಡದೆ ಅನ್ಯಾಯ ಮಾಡಿದಂತಾಗುತ್ತದೆ. ಡಾ.ಸರೋಜಿನಿ ಮಹಿಷಿ ವರದಿ ಜಾರಿಯಾಗಲಿಲ್ಲ. ಈಗ ಸಿದ್ದರಾಮಯ್ಯ ನವರು ಇಲ್ಲಿನ ಯುವಕರಿಗೆ ಉದ್ಯೋಗಗಳನ್ನು ನೀಡುವ ಸಂಬಂದ ತಕ್ಷಣ ಅದೇಶ ಹೊರಡಿಸಲು ಕರವೇ ನಾರಾಯಣ ಗೌಡ ಬಣದ ನರೇಂದ್ರ ತಲೇಕರ್ ಒತ್ತಾಯಿಸಿದರು.


ಕೈಗಾರಿಕಾ ಸ್ಥಾಪಿಸುವ ಉದ್ಯಮಿಗೆ ನೆಲ ಜಲ ಕೊಟ್ಟ ಮೇಲೆ ಅವರು ಇಲ್ಲಿನ ಯುವಕರಿಗೆ ,ಯುವತಿಯರಿಗೆ ಉದ್ಯೋಗ ನೀಡುವುದನ್ನು ಕಡ್ಡಾಯ ಮಾಡಬೇಕು .ಇದು ಶೇ. 50 ರಷ್ಟಾದರು ಇರಬೇಕು ಎಂದು ಕರವೇ ಸರ್ಕಾರಕ್ಕೆ ಮನವಿ ಮಾಡಿತು. ಮನವಿ ಸ್ವೀಕರಿಸಿದ‌ ಜಿಲ್ಲಾಧಿಕಾರಿ ಗಂಗೂಬಾಯಿ ಸರ್ಕಾರಕ್ಕೆ ಮನವಿ ಕಳುಹಿಸುವುದಾಗಿ ಹೇಳಿದರು.

Latest Indian news

Popular Stories