ಹಿಮಾಚಲದಲ್ಲಿ ಭಾರೀ ಮಳೆ: 150 ರಸ್ತೆ ಬಂದ್‌!

ಶಿಮ್ಲಾ/ಗುವಾಹಾಟಿ: ಹಿಮಾಚಲ ಪ್ರದೇಶ, ಅಸ್ಸಾಂನಲ್ಲಿ ಭಾರೀ ಧಾರಾಕಾರ ಮಳೆಯಾಗಿದೆ. ಹಿಮಾಚಲ ಪ್ರದೇಶದ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಮಳೆ, ಪ್ರವಾಹದ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದ 150 ರಸ್ತೆಗಳನ್ನು ಮುಚ್ಚಲಾಗಿದೆ.

ಧರ್ಮಶಾಲಾ, ಪಾಲಂಪುರದಲ್ಲಿ ಮಳೆ ಪ್ರಮಾಣ 200 ಮಿಲಿಮೀಟರ್‌ಗಿಂತ ಹೆಚ್ಚು ಮಳೆಯಾಗಿದೆ. ಹೀಗಾಗಿ ಜನಜೀವನಕ್ಕೆ ವ್ಯತ್ಯಯ ಉಂಟಾಗಿದೆ. ಮಂಡಿಯಲ್ಲಿನ 111 ರಸ್ತೆಗಳು, ಶಿಮ್ಲಾದ 9 ರಸ್ತೆಗಳು ಸೇರಿಂದತೆ ವಿವಿಧೆಡೆಯಲ್ಲಿ ರಸ್ತೆಗಳು ಜಲಾವೃತಗೊಂಡ ಕಾರಣ ಸಂಚಾರ ವ್ಯತ್ಯಯ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ರಸ್ತೆಗಳನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

30 ಜಿಲ್ಲೆಗಳಲ್ಲಿ ಭಾರೀ ತೊಂದರೆ ಪ್ರವಾಹ ಪೀಡಿತ ಅಸ್ಸಾಂನಲ್ಲಿ ಪರಿಸ್ಥಿತಿಯಲ್ಲಿ ಸುಧಾರಣೆ ಆಗಿಲ್ಲ. ರಾಜ್ಯದ 30 ಜಿಲ್ಲೆಗಳಲ್ಲಿ ಒಟ್ಟು 24.5 ಲಕ್ಷ ಮಂದಿ ಮಳೆಯಿಂದ ಹಾನಿಗೊಳಗಾಗಿದ್ದಾರೆ. ಕಾಜೀ ರಂಗ ಉದ್ಯಾನವನದಲ್ಲಿ ಈ ವರೆಗೆ 114 ಪ್ರಾಣಿಗಳು ಮೃತಪಟ್ಟಿವೆ. ಇನ್ನು ಬಿಹಾರ ಹಲವು ನದಿ ನೀರಿನ ಮಟ್ಟ ಹೆಚ್ಚಾಗಿದೆ.

Latest Indian news

Popular Stories