ಸತತ ಮಳೆ : ಹೊನ್ನಾವರ ಪಟ್ಟಣ ವ್ಯಾಪ್ತಿಯಲ್ಲಿ ಹೆದ್ದಾರಿ ಮೇಲೆ ಕುಸಿದ ಗುಡ್ಡ

ಕಾರವಾರ : ಜಿಲ್ಲೆಯಲ್ಲಿ ಸತತವಾಗಿ ಮಳೆಯಾಗುತ್ತಿದ್ದು,
ಹೊನ್ನಾವರ ಪಟ್ಟಣ ವ್ಯಾಪ್ತಿಯ ರಾಷ್ಟ್ರಿಯ ಹೆದ್ದಾರಿಯ ಮೇಲೆ ಕರ್ನಲ್ ಹಿಲ್ ಗುಡ್ಡ ಕುಸಿದಿದೆ. ಪರಿಣಾಮ ಒಂದು ಬದಿಯ ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ. ರಸ್ತೆಯ ಮೇಲೆ ಬಿದ್ದಿರುವ ಮಣ್ಣು , ಕಲ್ಲು ಬಿದ್ದಿರುವುದುನ್ನು ಜೆಸಿಬಿ ಬಳಸಿ ತೆಗೆಯುವ ಕಾರ್ಯ ಆರಂಭವಾಗಬೇಕಿದೆ. ಹೆದ್ದಾರಿ
ಒಂದು ಕಡೆಯಿಂದ ಮಾತ್ರ ದ್ವಿಪಥ ಸಂಚಾರ ವ್ಯವಸ್ಥೆ ಮಾಡಲಾಗಿದೆ‌ .


ಐಆರ್‌ಬಿ ಸಿಬ್ಬಂದಿಗಳು ರಸ್ತೆ ಅಡಚಣೆ ಕ್ಲಿಯರ್ ಮಾಡುವ
ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನೊಂದು ಗಂಟೆಯಲ್ಲಿ ರಸ್ತೆ ಸಂಚಾರ ಎಂದಿನಂತೆ ಸುಗಮವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Latest Indian news

Popular Stories