ಹೆಜಮಾಡಿ ಕೋಡಿ ಬಂದರಿನ ಕಾಮಗಾರಿಯ 18 ಲಕ್ಷದ ಸ್ವತ್ತು ಕಳ್ಳತನ

ಪಡುಬಿದ್ರಿ: ಹೆಜಮಾಡಿ ಕೋಡಿಯ ಬಂದರು ಕಾಮಗಾರಿಗೆ ಸಂಬಂಧಿಸಿದ 18 ಲಕ್ಷ ರೂಪಾಯಿಯ ಸ್ವತ್ತು ಕಳವಾಗಿದೆ‌.

ಅಸೋಸಿಯೇಟ್ಸ್‌ ಪ್ರೈವೇಟ್‌ ಲಿಮಿಟೆಡ್‌ ಪ್ರಾಜೆಕ್ಟ್ ಮ್ಯಾನೇಜರ್ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ‌.

ಹೆಜಮಾಡಿ ಕೋಡಿಯಲ್ಲಿ ಹೊಸ ಬಂದರಿನ ಕಾಮಗಾರಿಯನ್ನು ವಹಿಸಿಕೊಂಡು ದಿನಾಂಕ 23/03/2022 ರಿಂದ ಕಾಮಗಾರಿಯನ್ನು ಪ್ರಾರಂಭಿಸಲಾಗಿತ್ತು.ಅಲ್ಲಿಯೇ ಕಂಪೆನಿಯ ಸೈಟ್‌ ಆಫೀಸ್‌ ಇರುತ್ತದೆ.

ಬಂದರಿನ ಕಾಮಗಾರಿ ಕೆಲಸಕ್ಕಾಗಿ ಬಳಸಿ ಉಳಿದ ಸೊತ್ತುಗಳಾದ 1) M.S. Plate(5.4 MM) – 142 Pieces ಇವುಗಳ ಅಂದಾಜು ಮೌಲ್ಯ ರೂ. 10,39,637/-, 2) M.S. Plate(6 MM) – 33 Pieces (5.87 Metric Ton) ಇವುಗಳ ಅಂದಾಜು ಮೌಲ್ಯ ರೂ. 4,25,985/- 3) M.S. Plate(3MM) – 2.215 Metric Ton ಇವುಗಳ ಅಂದಾಜು ಮೌಲ್ಯ ರೂ. 1,63,356/-, 4) Steel Rod- 2.5 Ton ಇವುಗಳ ಅಂದಾಜು ಮೌಲ್ಯ ರೂ. 1,71,100/- ಸದ್ರಿ ಸೊತ್ತುಗಳನ್ನು ಸ್ಥಳದಲ್ಲಿಯೇ ಇರಿಸಿದ್ದು, ದಿನಾಂಕ 25/09/2023 ಸಂಜೆ 18:00 ಗಂಟೆಗೆ ಅರುಣ್‌ ಪಾಂಡ್ಯಾನ್‌ ಮತ್ತು ಅಕೌಂಟೆಂಟ್ ಆದ ಮಣಿಕಂಠನ್‌ ರವರು ಸ್ಥಳಕ್ಕೆ ಹೋಗಿ ನೋಡಿದಾಗ ಮೇಲಿನ ಸೊತ್ತುಗಳು ಇಲ್ಲದಿರುವುದು ಗಮನಕ್ಕೆ ಬಂದಿದೆ.

ಪ್ರಾಜೆಕ್ಟ್ ಮ್ಯಾನೇಜರ್ ಅವರು ದಿನಾಂಕ 26/09/2023 ರಂದು ಹೆಜಮಾಡಿ ಬಂದರಿನ ಕಾಮಗಾರಿ ಸ್ಥಳಕ್ಕೆ ಬಂದು ನೋಡಿ, ಪರಿಶೀಲಿಸಿ, ಸೊತ್ತುಗಳು ಕಳುವಾಗಿರುವ ಬಗ್ಗೆ ದೃಢಪಡಿಸಿಕೊಂಡಿರುತ್ತಾರೆ.

ಸೊತ್ತುಗಳು ದಿನಾಂಕ 24/08/2023 ರಂದು ಬೆಳಿಗ್ಗೆ 11:00 ಗಂಟೆಯಿಂದ ದಿನಾಂಕ 25/09/2023 ರ ಮಧ್ಯಾವಧಿಯಲ್ಲಿ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳುವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 18,00,078/- ಆಗಿರುವುದಾಗಿದೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 123/2023 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories