ರಸ್ತೆ ಬದಿಯ ರಕ್ಷಣಾ ತಡೆಗೋಡೆಗೆ ಅಪ್ಪಳಿಸಿದ ಕಾರು ಛಿದ್ರಗೊಂಡು ಅದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಗಾಯಗೊಂಡು ಇನ್ನಿಬ್ಬರು ಅಪಾಯದಿಂದ ಪಾರಾಗಿರುವ ಘಟನೆ ತಡರಾತ್ರಿ ಸಂಪಾಜೆ ಬಳಿ ನಡೆದಿದೆ.
ಮಂಡ್ಯ ಮೂಲದ ನಾಲ್ವರು ಛಾಯಾಗ್ರಾಹಕರು ಹೊನ್ನಾವರಕ್ಕೆ ತೆರಳಿ ರಾತ್ರಿ ಹಿಂತಿರುಗಿ ಬರುತ್ತಿದ್ದರು. ಮಾರ್ಗಮಧ್ಯದ
ಸಂಪಾಜೆ ಗೇಟ್ ಸಮೀಪ ಇವರು ಪ್ರಯಾಣಿಸುತ್ತಿದ್ದ ವೋಕ್ಸ್‌ವ್ಯಾಗನ್ ಕಾರು ನಿಯಂತ್ರಣ ತಪ್ಪಿ ಮುನ್ನುಗ್ಗಿ ರಸ್ತೆ ಬದಿಯ ರಕ್ಷಣಾ ಗೋಡೆಗೆ ಡಿಕ್ಕಿಯಾಗಿದೆ. ಇದರಿಂದ ಕಾರು ಛಿದ್ರ ವಾಗಿದ್ದು ತಡೆಗೋಡೆಯ ಪಟ್ಟಿ ಒಳಗೆ ನುಗ್ಗಿದೆ. ಇಬ್ಬರಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದಿಬ್ಬರು ಅಪಾಯದಿಂದ ಪಾರಾಗಿದ್ದಾರೆ.