ಪಾಕಿಸ್ತಾನ ತಂಡದ ಅನುಭವಿ ಆಲ್ ರೌಂಡರ್ ನಿವೃತ್ತಿ

ಸತತ ನಿರ್ಲಕ್ಷ್ಯದಿಂದ ಬೇಸತ್ತಿರುವ ತಂಡದ ಅನುಭವಿ ಆಲ್ ರೌಂಡರ್ ಇಮಾದ್ ವಾಸಿಂ (Imad Wasim) ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ.

34 ವರ್ಷ ವಯಸ್ಸಿನ ಎಡಗೈ ಸ್ಪಿನ್ ಆಲ್ರೌಂಡರ್ ಇಮಾದ್ ವಾಸಿಮ್ ಅವರು ನವೆಂಬರ್ 24 ಶುಕ್ರವಾರದಂದು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಏಕದಿನ ಹಾಗೂ ಟಿ20 ಸೇರಿದಂತೆ ಪಾಕಿಸ್ತಾನ ಪರ 121 ಪಂದ್ಯಗಳನ್ನು ಆಡಿರುವ ಇಮಾದ್ ತಮ್ಮ ನಿರ್ಧಾರವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ. ‘ಕಳೆದ ಹಲವು ದಿನಗಳಿಂದ ಈ ನಿರ್ಧಾರದ ಬಗ್ಗೆ ಯೋಚಿಸುತ್ತಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ತೊರೆಯಲು ಇದೇ ಸರಿಯಾದ ಸಮಯ ಎಂದು ಭಾವಿಸುತ್ತೇನೆ. ಪಾಕಿಸ್ತಾನ ಪರ ಆಡುವ ಮೂಲಕ ತಮ್ಮ ಕನಸು ನನಸಾಗಿದೆ. ನನ್ನ ವೃತ್ತಿಜೀವನದಲ್ಲಿ ಬೆಂಬಲಕ್ಕೆ ನಿಂತ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಾಗೂ ಅಭಿಮಾನಿಗಳಿಗೆ ಧನ್ಯವಾದ ಎಂದು ಇಮಾದ್ ಬರೆದುಕೊಂಡಿದ್ದಾರೆ.

Latest Indian news

Popular Stories