ಏಷಿಯಾ ಕಪ್: ಭಾರತ-ಪಾಕಿಸ್ತಾನ ಪಂದ್ಯ ಇಂದು | ಮಳೆಯ ಅಡ್ಡಿ ಸಾಧ್ಯತೆ

ನವದೆಹಲಿ: ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯೂ ಭಾರತ ಹಾಗೂ ಪಾಕಿಸ್ತಾನ ಪಂದ್ಯಕ್ಕೆ ಕಾಯುತ್ತಾನೆ. ಏಷ್ಯಾಕಪ್ ಟೂರ್ನಿಯಲ್ಲಿ ನೆರೆ ಹೊರೆಯ ರಾಷ್ಟ್ರದ ನಡುವೆ ಪಂದ್ಯಾಟ ನಡೆಯಲಿದೆ.ಶನಿವಾರ ಕ್ಯಾಂಡಿಯಲ್ಲಿ (ಪಲ್ಲೆಕೆಲ್ಲೆ ಮೈದಾನ) ಬಹುನಿರೀಕ್ಷಿತ ಹೈವೋಲ್ಟೇಡ್ ಪಂದ್ಯ ನಡೆಯಲಿದೆ.

ಈ ಪಂದ್ಯ ತನ್ನದೇ ರೀತಿಯಲ್ಲಿ ವಿಶೇಷ ಪಡೆದಿದ್ದು, 4 ವರ್ಷಗಳ ಬಳಿಕ ಉಭಯ ತಂಡಗಳು ಏಕದಿನ ಮಾದರಿಯಲ್ಲಿ ಮುಖಾಮುಖಿಯಾಗುತ್ತಿವೆ. ಆದರೆ, ಪಂದ್ಯಕ್ಕೆ ಮಳೆ ಆತಂಕ ಶುರುವಾಗಿದೆ. ಪಲ್ಲೆಕಲ್ಲೆಯಲ್ಲಿ ಬೆಳಗ್ಗಿನಿಂದ ಮಧ್ಯಾಹ್ನದವರೆಗೂ ಮಳೆ ಮುನ್ಸೂಚನೆ ಇದ್ದು, ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಆತಂಕ ಶುರುವಾಗಿದೆ.

ಆಗಸ್ಟ್​ 31ರಂದು ಆತಿಥೇಯ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯವೂ ಇಲ್ಲೇ ನಡೆಯಿತು. ಆದರೆ ಯಾವುದೇ ರೀತಿ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸಲಿಲ್ಲ. ಸದ್ಯ ಕ್ಯಾಂಡಿಯಲ್ಲಿ ಮಳೆಗಾಲದ ಸಮಯವಾಗಿದ್ದು, ಸೆಪ್ಟೆಂಬರ್​ ಮಳೆ ಸುರಿಯುವ ಸಾಧ್ಯತೆ ಶೇಕಡಾ 91ರಷ್ಟಿದೆ ಎಂದು ಸ್ಥಳಿಯ ಹವಾಮಾನ ಇಲಾಖೆ ತಿಳಿಸಿದೆ.

Latest Indian news

Popular Stories