Featured StoryINTERNATIONAL

ಇಸ್ರೇಲ್ ಪರ ನಿಂತ ಸ್ಟಾರ್ ಬಕ್ಸ್’ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬಹಿಷ್ಕಾರದ ಬಿಸಿ | 11 ಬಿಲಿಯನ್ ಡಾಲರ್ ಮೌಲ್ಯ ನಷ್ಟ!

ಪ್ಯಾಲೆಸ್ಟೈನ್-ಇಸ್ರೇಲ್ ಸಂಘರ್ಷದಲ್ಲಿ ಇಸ್ರೇಲ್ ಪರ ಟ್ವೀಟ್ ಮಾಡಿದ್ದ ಸ್ಟಾರ್ ಬಕ್ಸ್’ಗೆ ಬಹಿಷ್ಕಾರದ ಬಿಸಿ ತಟ್ಟಿದೆ‌. ಜಾಗತಿಕ ರಾಜಕೀಯ ಅಸಮತೋಲನತೆ, ಮಾರಾಟದಲ್ಲಿ ದಿಢೀರ್ ಕುಸಿತ ಮತ್ತು ಬಹಿಷ್ಕಾರದ ಕಾರಣ ಸಂಸ್ಥೆಯ ಒಟ್ಟು ಮೌಲ್ಯದ ಶೇ .9.4 ರಷ್ಟು ಕುಸಿತ ಕಂಡಿದೆ.

ಇದರ ಅಂದಾಜು ಮೊತ್ತ ಬರೋಬ್ಬರಿ 11 ಬಿಲಿಯನ್ ಡಾಲರ್ ನಷ್ಟಿದೆ ಎಂದು ವರದಿ ಬೆಳಕು ಚೆಲ್ಲಿದೆ.

ಸ್ಟಾರ್ ಬಕ್ಸ್ ಸಂಸ್ಥೆ ರಜಾ ಕಾಲದ ಡಿಸ್ಕೌಟ್ ಆಫರ್ ಪ್ರಸ್ತುತ ಪಡಿಸಿದರೂ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ಟಾರ್ ಬಕ್ಸ್ ಬಹಿಷ್ಕಾರ ಸಂಸ್ಥೆಗೆ ಇದೀಗ ಇಸ್ರೇಲ್ ಪರ ನಿಂತ ಕಾರಣಕ್ಕೆ ಕಪಾಳಮೋಕ್ಷವಾಗಿ ಪರಿಣಮಿಸಿದೆ. ಮಧ್ಯ ಪ್ರಾಚ್ಯ ದೇಶದಲ್ಲಿ ಬಹಿಷ್ಕಾರದ ಕಿಚ್ಚು ಹೆಚ್ಚಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button