ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ-ಉಪ ಚುನಾವಣೆ : ಚುನಾವಣೆ ವೇಳಾಪಟ್ಟಿ ನಿಗದಿ

ವಿಜಯಪುರ: ವಿಜಯಪುರ ಜಿಲ್ಲೆಯ ಅವಧಿ ಮುಕ್ತಾಯವಾಗಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಸಾರ್ವತ್ರಿಕ ಚುನಾವಣೆ ಹಾಗೂ ಉಪ ಚುನಾವಣೆ ನಡೆಸಲು ಚುನಾವಣಾ ಆಯೋಗದಿಂದ ವೇಳಾಪಟ್ಟಿಯನ್ನು ನಿಗದಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.
ಜಿಲ್ಲೆಯ ಚಡಚಣ ಪಟ್ಟಣ ಪಂಚಾಯತಿಗೆ ಸಾರ್ವತ್ರಿಕೆ ಚುನಾವಣೆ ಹಾಗೂ ಮುದ್ದೇಬಿಹಾಳ ಪುರಸಭೆಯ ವಾರ್ಡ ನಂ.18 ಮತ್ತು ಮನಗೂಳಿ ಪಟ್ಟಣ ಪಂಚಾಯತಿಯ ವಾರ್ಡ ನಂ.7ಕ್ಕೆ ಉಪ ಚುನಾವಣೆ ನಡೆಸಲು ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ.

ವೇಳಾಪಟ್ಟಿಯಂತೆ ಡಿ.8ರಂದು ಚುನಾವಣಾ ಅಧಿಸೂಚನೆ ಹೊರಡಿಸುವುದು, ನಾಮಪತ್ರಗಳನ್ನು ಸಲ್ಲಿಸಲು ಡಿ.15 ಕೊನೆಯ ದಿನಾಂಕ, ಉಮೇದುವಾರಿಕೆಗಳನ್ನು ಹಿಂತೆಗದುಕೊಳ್ಳಲು ಡಿ.18 ಕೊನೆಯ ದಿನಾಂಕ, ಅವಶ್ಯಕವಿದ್ದರೆ ದಿನಾಂಕ : 27-12-2023 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ಮತ್ತು ಮರು ಮತದಾನ ಅವಶ್ಯವಿದ್ದಲ್ಲಿ ತಾಲೂಕಿನ ಕೇಂದ್ರ ಸ್ಥಳದಲ್ಲಿ ಡಿ.30ರಂದು ಬೆಳಿಗ್ಗೆ 8 ಗಂಟೆಯಿಂದ ಮರು ಮತದಾನ ಹಾಗೂ ಡಿ.30 ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಬೇಕೋ ಆ ದಿನಾಂಕ ಮತ್ತು ದಿನವಾಗಿದೆ.
ಚಡಚಣ ಪಟ್ಟಣ ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ವಾರ್ಡ ನಂ.1ಕ್ಕೆ ಪರಿಶಿಷ್ಟ ಪಂಗಡ, ವಾರ್ಡ ನಂ.2 ಹಿಂದುಳಿದ ವರ್ಗ-ಎ (ಮಹಿಳೆ), ವಾರ್ಡ ನಂ.3 ಸಾಮಾನ್ಯ, ವಾರ್ಡ ನಂ.4 ಹಿಂದುಳಿದ ವರ್ಗ-ಬಿ, ವಾರ್ಡ ನಂ.5 ಹಿಂದುಳಿದ ವರ್ಗ-ಎ, ವಾರ್ಡ ನಂ.6 ಸಾಮಾನ್ಯ, ವಾರ್ಡ ನಂ.7 ಪರಿಶಿಷ್ಟ ಜಾತಿ (ಮಹಿಳೆ), ವಾರ್ಡ ನಂ.8 ಸಾಮಾನ್ಯ (ಮಹಿಳೆ), ವಾರ್ಡ ನಂ.9 ಸಾಮಾನ್ಯ, ವಾರ್ಡ ನಂ.10 ಪರಿಶಿಷ್ಟ ಜಾತಿ, ವಾರ್ಡ ನಂ.11 ಸಾಮಾನ್ಯ, ವಾರ್ಡ ನಂ.12 ಹಿಂದುಳಿದ ವರ್ಗ-ಎ, ವಾರ್ಡ ನಂ.13 ಸಾಮಾನ್ಯ (ಮಹಿಳೆ), ವಾರ್ಡ ನಂ.14 ಸಾಮಾನ್ಯ (ಮಹಿಳೆ), ವಾರ್ಡ ನಂ.15 ಪರಿಶಿಷ್ಟ ಜಾತಿ ಹಾಗೂ ವಾರ್ಡ ನಂ.16 ಸಾಮಾನ್ಯ (ಮಹಿಳೆ)ಗೆ ಮೀಸಲಿರಿಸಲಾಗಿದೆ.

ಉಪ ಚುನಾವಣೆ ಜರುಗುವ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣ ಪಂಚಾಯತಿಯ ವಾರ್ಡ 7ರಕ್ಕೆ ಸಾಮಾನ್ಯ ಹಾಗೂ ಮುದ್ದೇಬಿಹಾಳ ತಾಲೂಕಿನ ಮುದ್ದೇಬಿಹಾಳ ಪುರಸಭೆ ವಾರ್ಡ ನಂ.18 ಸಾಮಾನ್ಯ ವರ್ಗಕ್ಕೆ ಮೀಸಲಿರಿಸಲಾಗಿದೆ.
ಚಡಚಣ ಪಟ್ಟಣ ಪಂಚಾಯತಿಯ 16 ವಾರ್ಡಗಳಿಗೆ ಜರುಗುವ ಸಾರ್ವತ್ರಿಕ ಚುನಾವಣೆಗೆ 16 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಹಾಗೂ ಉಪ ಚುನಾವಣೆಗೆ ವಾರ್ಡಿಗೆ ಒಂದರಂತೆ ಒಂದೊಂದು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಸದಾಚಾರ ಸಂಹಿತಯು ದಿನಾಂಕ : 08-12-2023 ರಿಂದ ದಿನಾಂಕ : 30-12-2023ರವರೆಗೆ ಸಾರ್ವತ್ರಿಕ ಚುನಾವಣೆ ನಡೆಯುವ ಚಡಚಣ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಹಾಗೂ ಉಪ ಚುನಾವಣೆಗಳು ನಡೆಯುವ ಮನಗೂಳಿ ಪಟ್ಟಣ ಪಂಚಾಯತ್ನ ವಾರ್ಡ ನಂ.07 ಹಾಗೂ ಮುದ್ದೇಬಿಹಾಳ ಪುರಸಭೆಯ ವಾರ್ಡ ನಂ.18ರ ವ್ಯಾಪ್ತಿಯಲ್ಲಿ ಮಾತ್ರ ಜಾರಿಯಲ್ಲಿರುತ್ತದೆ. ಸದಾಚಾರ ಸಂಹಿತೆಯು ಉಲ್ಲಂಘನೆಯಾಗದಂತೆ ನಿಗಾ ವಹಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories