ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಜಯ ಪ್ರಕಾಶ್ ಹೆಗ್ಡೆ ವಿರುದ್ಧ ದೂರು

ಶಿರ್ವ, ಮಾ.29: ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸಂಭವನೀಯ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಶಿರ್ವ ಗ್ರಾಮದ ಜಾರಾಂದಾಯ ದೈವಸ್ಥಾನದ ಜಾತ್ರೆಗೆ ತೆರಳಿ ಚುನಾವಣಾ ಸಭೆ ನಡೆಸುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವುದಾಗಿ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾ.26ರಂದು ರಾತ್ರಿ 11:30ರ ಸುಮಾರಿಗೆ ಜಯ ಪ್ರಕಾಶ್ ಹೆಗ್ಡೆ ಶಿರ್ವ ಜಾರಾಂದಾಯ ದೈವಸ್ಥಾನದ ಜಾತ್ರೆಗೆ ತೆರಳಿ ಸಾರ್ವಜನಿಕರೊಂದಿಗೆ ಸಭೆ ನಡೆಸಿ ಹೋಗಿರುವುದಾಗಿ ಕಾಪು ಪ್ಲೈಯಿಂಗ್ ಸ್ಕ್ವಾಡ್ ಟೀಮ್ನ ವಿನ್ಸೆಂಟ್ ವಿನೋದ್ ಡಿಸೋಜ ಮಾಹಿತಿ ಬಂದಿತ್ತು. ಅದರಂತೆ ತಂಡ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ದೈವಸ್ಥಾನದ ಆಡಳಿತ ಮಂಡಳಿಯವರು ತಡರಾತ್ರಿ ಯವರೆಗೆ ಕಾರ್ಯಕ್ರಮ ನಡೆಸಿರುವುದು ಮತ್ತು ಈ ಧಾರ್ಮಿಕ ಸ್ಥಳದಲ್ಲಿ ಆಡಳಿತ ಮಂಡಳಿಯವರು ಜಯಪ್ರಕಾಶ್ ಹೆಗ್ಡೆ ಜೊತೆಗೂಡಿ ಚುನಾವಣಾ ಕಾರ್ಯಕ್ರಮ ನಡೆಸಿ ಸಾರ್ವಜನಿಕರಿಗೆ ಪ್ರಭಾವ ಬೀರಿರುವುದು ಕಂಡು ಬಂದಿದೆ ಎಂದು ದೂರಲಾಗಿದೆ. ಈ ಮೂಲಕ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದಾಗಿ ಆರೋಪಿಸಿ ವಿನ್ಸೆಂಟ್ ವಿನೋದ್ ಡಿಸೋಜ ನೀಡಿ ರುವ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories