SUICIDE CASE: ಮೃತದೇಹ ಇರುವ ಟ್ಯಾಂಕ್‌ ನೀರು ಜನರಿಗೆ ಪೂರೈಕೆ!

ವ್ಯಕ್ತಿಯೊಬ್ಬ ಟ್ಯಾಂಕ್‌ಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು, ಹೆಣ ಇರುವ ಟ್ಯಾಂಕ್‌ ನೀರನ್ನೇ ಜನರು ಕುಡಿಯುತ್ತಿದ್ದ ಘಟನೆ ಬೀದರ್‌ನಲ್ಲಿ ನಡೆದಿದೆ.

ಬೀದರ್‌ನ ಅಣದೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಕಳೆದ ಐದು ಆರು ದಿನಗಳ ಹಿಂದೆ ಟ್ಯಾಂಕಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ.

ಆದರೆ ಐದಾರು ದಿನಗಳಿಂದ ಹೆಣ ಇರುವ ಟ್ಯಾಂಕ್‌ ನೀರನ್ನು ಸಿಬ್ಬಂದಿ ಜನಕ್ಕೆ ಪೂರೈಕೆ ಮಾಡಿದೆ.

ಕುಡಿಯುವ ನೀರು ವಾಸನೆ ಬಂದ ಹಿನ್ನೆಲೆಯಲ್ಲಿ ಟ್ಯಾಂಕ್ ಪರಿಶೀಲನೆ ನಡೆಸಿದ್ದಾರೆ. ಟ್ಯಾಂಕ್‌ನಲ್ಲಿ ಶವ ಇರುವುದನ್ನು ನೋಡಿ ಹಣದೂರು ಗ್ರಾಮಸ್ಥರು ಶಾಕ್‌ಗೆ ಒಳಗಾಗಿದ್ದಾರೆ. ತಕ್ಷಣ ಸ್ಥಳಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಅದೇ ರೀತಿ ಸಿಬ್ಬಂದಿ ಟ್ಯಾಂಕ್‌ ಶುದ್ಧೀಕರಣಕ್ಕೆ ಮುಂದಾಗಿದ್ದಾರೆ.

Latest Indian news

Popular Stories