ಸಂಸದ ಡ್ಯಾನಿಶ್ ಅಲಿಯ ಅವಹೇಳನ: ಬಿಜೆಪಿ ಸಂಸದನ ಭಾಷೆ ಮುಸ್ಲಿಮ್ ಸಮುದಾಯದ ಮೇಲಿನ ದ್ವೇಷಕ್ಕೆ ಸ್ಪಷ್ಟ ಸಾಕ್ಷಿ | ಸಂಸತ್ ಸದಸ್ಯತ್ವದಿಂದ ವಜಾಗೊಳಿಸಿ | ಜಮಾಅತೆ ಇಸ್ಲಾಮಿ ಹಿಂದ್ ಆಗ್ರಹ

ಹೊಸದಿಲ್ಲಿ: ಸಂಸದ ಬಿಎಸ್‌ಪಿಯ ಕುನ್ವರ್ ಡ್ಯಾನಿಶ್ ಅಲಿ ವಿರುದ್ಧ ಸಂಸತ್ತಿನಲ್ಲಿ ಬಿಜೆಪಿ ಸಂಸದ ರಮೇಶ್ ಬಿಧುರಿ ಬಳಸಿರುವ ಭಯಾನಕ, ಆಕ್ಷೇಪಾರ್ಹ ಮತ್ತು ಹೊಲಸು ಭಾಷೆಯನ್ನು ಜಮಾತೆ ಇಸ್ಲಾಮಿ ಹಿಂದ್ ಖಂಡಿಸಿದೆ.

ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಜಮಾತೆ ಇಸ್ಲಾಮಿ ಹಿಂದ್‌ನ ರಾಷ್ಟ್ರೀಯ ಮಾಧ್ಯಮ ಕಾರ್ಯದರ್ಶಿ ಕೆ.ಕೆ.ಸುಹೇಲ್, ಲೋಕಸಭೆಯಲ್ಲಿ ಬಿಎಸ್‌ಪಿ ಸಂಸದ ಕುನ್ವರ್ ಡ್ಯಾನಿಶ್ ಅಲಿ ವಿರುದ್ಧ ಬಿಜೆಪಿಯ ರಮೇಶ್ ಬಿಧುರಿ ಅವರು ಭೀಕರ, ಆಕ್ಷೇಪಾರ್ಹ ಮತ್ತು ಹೊಲಸು ಭಾಷೆ ಬಳಸಿದ್ದಾರೆ. ಪ್ರತಿಯೊಬ್ಬ ಭಾರತೀಯನನ್ನೂ ಇದು ಕೆರಳಿಸಿದೆ. ಸಂಸತ್ತಿನ ಗುಣಮಟ್ಟ ಮತ್ತು ಘನತೆಯನ್ನು ಕಡಿಮೆ ಮಾಡಿದೆ. ಸಂಸತ್ತಿನ ಸದಸ್ಯನ ವಿರುದ್ಧ ಜನಾಂಗೀಯ ನಿಂದನೆಗಳನ್ನು ಅವರ ಧಾರ್ಮಿಕ ಗುರುತನ್ನು ಗುರಿಯಾಗಿಟ್ಟುಕೊಂಡು ಬಿಜೆಪಿ ಸಂಸದರು ನಿಂದನೀಯ ಭಾಷೆಯನ್ನು ಬಳಸುತ್ತಿರುವುದು ಭಾರತದಲ್ಲಿನ ಇಡೀ ಮುಸ್ಲಿಂ ಸಮುದಾಯದ ಮೇಲೆ ಅವರಿಗಿರುವ ದ್ವೇಷದ ಸ್ಪಷ್ಟ ಸಾಕ್ಷಿಯಾಗಿದ್ದು ಇದು ಇಡೀ ಸಮುದಾಯವನ್ನು ಅವಮಾನಿಸುವ ಉದ್ದೇಶವನ್ನು ಹೊಂದಿದೆ. ಸಂಸದರನ್ನು ಬೈಯುವುದು ಆಘಾತಕಾರಿ ಮತ್ತು ಅಸಹ್ಯಕರ ಮಾತ್ರವಲ್ಲ ಅಪರಾಧವೂ ಆಗಿದೆ. ಸಂಸದ ಬಿಧುರಿ ಅವರು ಸಂಸತ್ತಿನ ಘನತೆಗೆ ಧಕ್ಕೆ ತರುವಂತಹ ಅಪರಾಧ ಮಾಡಿದ್ದಾರೆ.ಬಿಧುರಿ ಅವರ ಅವಹೇಳನಕಾರಿ ಹೇಳಿಕೆಗಳನ್ನು ದಾಖಲೆ ಪುಸ್ತಕಗಳಿಂದ ಹೊರಹಾಕಲಾಗಿದೆ ಎಂದು ತಿಳಿದು ಸಮಾಧಾನವಾಗಿದೆ. ಸ್ಪೀಕರ್ ಅಂತಹ ವರ್ತನೆಯನ್ನು ಪುನರಾವರ್ತನೆ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಕೆಳಮನೆಗೆ ಎಚ್ಚರಿಕೆ ನೀಡಿದ್ದಾರೆ.

ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಅವರು, “ಸದಸ್ಯರು ಮಾಡಿದ ಟೀಕೆಗಳಿಂದ ಪ್ರತಿಪಕ್ಷಗಳಿಗೆ ನೋವಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ” ಎಂದು ಹೇಳಿದರು. ಭಿದುರಿಯ ಕೃತ್ಯ ಕ್ಷಮಿಸಿಬಿಡಬಹುದಾದ ಕೇವಲ ಒಂದು ಸಣ್ಣ ದುಷ್ಕೃತ್ಯವಲ್ಲ. ಜನರಿಂದ ಚುನಾಯಿತರಾದ ಸಂಸದರ ಇಂತಹ ಕೀಳು ಮತ್ತು ನಾಚಿಕೆಗೇಡಿನ ವರ್ತನೆಯು ಹೊಸ ಸಂಸತ್ತಿನ ಘನತೆಗೆ ಮಾರಕ.

ಸಂಸದರ ಕೃತ್ಯದಿಂದ ಅವರಲ್ಲಿನವ ನಿರ್ದಿಷ್ಟ ಸಮುದಾಯದ ಮೇಲಿನ ಅಪರಾಧ ಮನೋಭಾವವನ್ನು ಎತ್ತಿ ತೋರಿಸುತ್ತದೆ. ಅದರೊಂದಿಗೆ ಜಿಂಗೊಯಿಸ್ಟಿಕ್ ತೀವ್ರ ರಾಷ್ಟ್ರೀಯವಾದದ ಪರಿಣಾಮವು ಕೂಡ ಇದರಲ್ಲಿ ಕಾಣಬಹುದಾಗಿದೆ. ಈ ದ್ವೇಷವು ಮುಸ್ಲಿಮರು,ದಲಿತರು, ಆದಿವಾಸಿಗಳು ಮತ್ತು ಕುಕಿಗಳ ಮೇಲೆ ಪರಿಣಾಮ ಬೀರುವಷ್ಟರ ಮಟ್ಟಿಗೆ ಬೆಳೆಯುತ್ತಿದೆ. ಇಂತಹ ಕೃತ್ಯವೆಸಗಿದ ಬಿಜೆಪಿ ಸಂಸದನ ಸಂಸತ್ ಸದಸ್ಯವನ್ನು ರದ್ದುಗೊಳಿಸಿ ಬಿಜೆಪಿ ಸದಸ್ಯತ್ವದಿಂದ ವಜಾಗೊಳಿಸಬೇಕೆಂದು ಜಮಾಅತೆ ಇಸ್ಲಾಮಿ ಹಿಂದ್ ಆಗ್ರಹಿಸಿದೆ.

Latest Indian news

Popular Stories