ಕಲ್ಬುರ್ಗಿ ವಕೀಲರ ಕೊಲೆ ಪ್ರಕರಣ: ಹಂತಕರ ಪತ್ತೆಗೆ ಎರಡು ತಂಡ ರಚನೆ – ಎಸ್ಪಿ

ಕಲಬುರಗಿಯಲ್ಲಿ ಹಾಡ ಹಗಲೇ ನಡೆದ ವಕೀಲನ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಠಾಣೆಯಲ್ಲಿ 6 ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.

ವೃತ್ತಿಯಲ್ಲಿ ವಕೀಲರು ಆಗಿರುವ 40 ವರ್ಷದ ಈರಣ್ಣಗೌಡ ಎಂಬುವವರು ನೂರಾರು ಎಕರೆ ಜಮೀನಿನ ಜೊತೆಗೆ ರಿಯಲ್ ಎಸ್ಟೇಟ್​ ಬಿಸ್​ನೆಸ್ ಮಾಡುವುದರ ಜೊತೆಗೆ ವಕೀಲ ವೃತ್ತಿಯನ್ನು ಸಹ ಮಾಡುತ್ತಿದ್ದರು. ಈ ಮಧ್ಯೆ ಸಂಬಂಧಿಗಳ ಮಧ್ಯೆ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆಯುತ್ತಿತ್ತು. ಪ್ರಕರಣ ಕೋರ್ಟ್‌ನಲ್ಲಿದ್ದರು ಸಹ, ಎರಡು ಕುಟುಂಬಸ್ಥರ ಮಧ್ಯೆ ದೊಡ್ಡಮಟ್ಟದ ವೈಷಮ್ಯ ಬೆಳೆದಿತ್ತು.

ಅಪಾರ್ಟ್ಮೆಂಟ್‌ನಿಂದ ಕೋರ್ಟ್‌ಗೆ ತೆರಳಲು ಈರಣ್ಣಗೌಡ ಬೈಕ್ ನಲ್ಲಿ ಹೋಗುತ್ತಿರುವಾಗ ಬೈಕ್ ಅಡ್ಡಗಟ್ಟಿದ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಹೊಡೆಯಲು ಮುಂದಾದಾಗ ಅವರಿಂದ ತಪ್ಪಿಸಿಕೊಂಡು ಅಪಾರ್ಟ್ಮೆಂಟ್‌ನ ಬೆಸ್‌ಮೆಂಟ್‌ಗೆ ಬಂದಾಗ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ನಂತರ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್ ಚೇತನ್, ಕೋರ್ಟ್‌ಗೆ ಹೋಗುವಾಗ ಸಮಯದಲ್ಲಿ ಹಂತಕರು ಅಟ್ಯಾಕ್ ಮಾಡಿದ್ದಾರೆ. ಹಂತಕರ ಬಂಧನಕ್ಕೆ ವಿವಿ ಠಾಣೆ ಪೊಲೀಸರ ನೇತೃತ್ವದಲ್ಲಿ ಎರಡು ವಿಶೇಷ ತಂಡ ರಚಿಸಲಾಗಿದ್ದು ಹಂತಕರನ್ನು ಶೀಘ್ರವೇ ಬಂಧಿಸಲಾಗುವುದೆಂದು ಹೇಳಿದ್ದಾರೆ.

Latest Indian news

Popular Stories