ಬಹುಮಹಡಿ ಶಾಪಿಂಗ್ ಮಾಲ್‌ನಲ್ಲಿ ಬೆಂಕಿ ಅವಘಡ; ಕನಿಷ್ಠ 11 ಮಂದಿ ಮೃತ್ಯು

ಕರಾಚಿ: ಬಹುಮಹಡಿ ಶಾಪಿಂಗ್ ಮಾಲ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದ ಕನಿಷ್ಠ 11 ಮಂದಿ ಮೃತಪಟ್ಟಿರುವ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ಶನಿವಾರ(ನ.25 ರಂದು) ನಡೆದಿರುವುದು ವರದಿಯಾಗಿದೆ.

ಕರಾಚಿಯ ರಶೀದ್ ಮಿನ್ಹಾಸ್ ರಸ್ತೆಯಲ್ಲಿರುವ ಆರ್‌ಜೆ ಶಾಪಿಂಗ್ ಮಾಲ್‌ನಲ್ಲಿ ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯ ಜಿಯೋ ನ್ಯೂಸ್ ತಿಳಿಸಿದೆ.

ಬೆಂಕಿ ಕಾಣಿಸಿಕೊಂಡ ಕೆಲವೇ ನಿಮಿಷದಲ್ಲಿ ಅಗ್ನಿಶಾಮಕ ದಳ ಸ್ಥಳಕ್ಕೆ ತೆರಳಿ 50 ಮಂದಿಯನ್ನು ರಕ್ಷಣೆ ಮಾಡಿದೆ. ಆದರೆ ಕಟ್ಟಡದಲ್ಲಿ ಇನ್ನು ಅನೇಕ ಜನ ಸಿಲುಕಿಕೊಂಡಿದ್ದಾರೆ.

ಬೆಂಕಿ ಹೊತ್ತಿಕೊಳ್ಳಲು ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಬೆಂಕಿಯಲ್ಲಿ ಗಾಯಗೊಂಡ ಹಲವಾರು ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಯೋ ವರದಿ ಮಾಡಿದೆ.

ಕರಾಚಿ ಮೇಯರ್ ಮುರ್ತಾಜಾ ವಹಾಬ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಘಟನೆಯಲ್ಲಿ ಮೃತಪಟ್ಟಿರುವ ಬಗ್ಗೆ ಹೇಳಿದ್ದಾರೆ.

Latest Indian news

Popular Stories