ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಬರೋಬ್ಬರಿ ದಾಖಲೆಯ 14ನೇ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ. ಪ್ರಣಾಳಿಕೆ ವೇಳೆ ವಾಗ್ಧಾನ ಮಾಡಿದ್ದ ಐದು ಗ್ಯಾರಂಟಿ ಯೋಜನೆಗಳಿಗೆ ಸಂಪನ್ಮೂಲ ಕ್ರೋಡೀಕರಣ ಹಾಗೂ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ ಹೇಗೆ ಅನುದಾನ ಹೊಂದಾಣಿಕೆ ಮಾಡಲಾಗುತ್ತದೆ ಎಂಬ ಆರ್ಥಿಕ ಲೆಕ್ಕಾಚಾರದ ಗುಟ್ಟು ಬಹಿರಂಗವಾಗಲಿದೆ.
ಏನೇನು ನಿರೀಕ್ಷೆಗಳು?
01 ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಾಣಿಕೆ.
02 ಬಸವರಾಜ ಬೊಮ್ಮಾಯಿ ಸರಕಾರದ ಕೆಲವು ಘೋಷಣೆಗಳಿಗೆ ಅರ್ಧ ಚಂದ್ರ.
03 ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿದ್ದ ಯೋಜನೆಗಳ ಮರು ಜಾರಿ ಸಂಭವ.
04 ಅಭಿವೃದ್ಧಿ ಮತ್ತು ಜನಪ್ರಿಯ ಕಾರ್ಯಕ್ರಮ ನಡುವೆ ಸಮತೋಲನಕ್ಕೆ ಸರ್ಕಸ್.
05 ಆರ್ಥಿಕ ಶಿಸ್ತನ್ನು ಪಾಲಿಸುವ ಕಸರತ್ತು.
ಹೆಗಡೆ ದಾಖಲೆ ಅಂತ್ಯ
ಈವರೆಗೆ 13 ಬಜೆಟ್ ಮಂಡಿ ಸಿದ್ದ ಹೆಗ್ಗಳಿಕೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರಲ್ಲಿದ್ದು, ಅದನ್ನು ಸಿದ್ದರಾಮಯ್ಯ ಮುರಿಯುತ್ತಿದ್ದಾರೆ. ಸಿದ್ದರಾಮಯ್ಯ ಡಿಸಿಎಂ, ಹಣ ಕಾಸು ಸಚಿವರಾಗಿ 1995-96ರಲ್ಲಿ ಮೊದಲ ಬಾರಿಗೆ ಬಜೆಟ್ ಮಂಡಿಸಿ ದ್ದರು. 2018-19ರಲ್ಲಿ ಮೊದಲ ಮುಖ್ಯಮಂತ್ರಿ ಅವಧಿಯ ಕೊನೆಯ ಹಾಗೂ 13ನೇ ಬಾರಿಯ ಆಯವ್ಯಯ ಮಂಡಿಸಿದ್ದರು. ಇವೆಲ್ಲದರಲ್ಲೂ ಬಸವಣ್ಣ, ಡಾ| ಬಿ.ಆರ್.ಅಂಬೇಡ್ಕರ್, ರಾಮ ಮನೋಹರ ಲೋಹಿಯಾ ಮತ್ತು ದೇವರಾಜ ಅರಸ್ ನೆರಳು ಸ್ಪಷ್ಟವಾಗಿ ದಾಖಲಾಗಿವೆ.
ಮೀರದ ಆರ್ಥಿಕ ಶಿಸ್ತು
l ಇದುವರೆಗಿನ ಬಜೆಟ್‌ನಲ್ಲಿ ರಾಜಸ್ವ ಮತ್ತು ಮಾಡಿರುವ ವೆಚ್ಚಗಳೆಲ್ಲವೂ ವರ್ಷದಿಂದ ವರ್ಷಕ್ಕೆ ವೃದ್ಧಿ.
l 2014-15ರಿಂದ 2018-19ರ ವರೆಗೂ 127 ಕೋಟಿಯಿಂದ 910 ಕೋಟಿ ರೂ. ವರೆಗೂ ಹೆಚ್ಚಿದ ರಾಜಸ್ವ. ಇಷ್ಟಿದ್ದರೂ ಆರ್ಥಿಕ ಶಿಸ್ತು ಮೀರಿಲ್ಲ.