ಕರಾವಳಿಯಲ್ಲಿ ಇಂದು ಕೂಡ ಭಾರೀ ಮಳೆ ಸಾಧ್ಯತೆ – ಹವಾಮಾನ ಇಲಾಖೆ

ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದು ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ರೆಡ್ ಅಲರ್ಟ್​ ಘೋಷಿಸಲಾಗಿದೆ.

ಜುಲೈ 8 ರಂದು ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಬೆಳಗಾವಿ, ಬೀದರ್, ಹಾವೇರಿ, ಚಿತ್ರದುರ್ಗ, ದಾವಣಗೆರೆ, ಹಾಸನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಇನ್ನುಳಿದಂತೆ ಬಹುತೇಕ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಮುಲ್ಕಿ, ಕೋಟ, ಕಾರ್ಕಳ, ಉಡುಪಿ, ಮಂಕಿ, ಪಣಂಬೂರು, ಶಿರಾಲಿ, ಮಂಗಳೂರಿನಲ್ಲಿ ಅತ್ಯಧಿಕ ಮಳೆಯಾಗಿದೆ. ಕುಂದಾಪುರ, ಮಂಗಳೂರು ವಿಮಾನ ನಿಲ್ದಾಣ, ಕದ್ರಾ, ಕಾರವಾರ, ಗೇರುಸೊಪ್ಪ, ಸಿದ್ದಾಪುರ, ಪುತ್ತೂರು, ಮಾಣಿ, ಸುಳ್ಯ, ಬೆಳ್ತಂಗಡಿ, ಹೊನ್ನಾವರ, ಅಂಕೋಲಾ, ಕ್ಯಾಸಲ್ ರಾಕ್, ಕುಮಟಾ, ಕೊಲ್ಲೂರು, ಭಾಗಮಂಡಲದಲ್ಲಿ ಭಾರಿ ಮಳೆ ಸುರಿದಿದೆ. ಬೇಲಿಕೇರಿ, ಲಿಂಗನಮಕ್ಕಿ, ಉಪ್ಪಿನಂಗಡಿ, ಸುಬ್ರಹ್ಮಣ್ಯ, ಗೋಕರ್ಣ, ಕಳಸ, ಧರ್ಮಸ್ಥಳ, ಯಲ್ಲ್ಲಾಪುರ, ಶೃಂಗೇರಿ,ತಾಳಗುಪ್ಪ, ನಾಪೋಕ್ಲು, ಮಂಚಿಕೆರೆ, ಜಯಪುರ, ವಿರಾಜಪೇಟೆಯಲ್ಲಿ ಮಳೆಯಾಗಿದೆ.

ಕಮ್ಮರಡಿ, ಲೋಂಡಾ, ತ್ಯಾಗರ್ತಿ, ಕೊಪ್ಪ, ಬಾಳೆಹೊನ್ನೂರು, ಮೂರ್ನಾಡು, ಸೋಮವಾರಪೇಟೆ, ಪೊನ್ನಂಪೇಟೆ, ಕಿರವತ್ತಿ, ಹಳಿಯಾಳ, ಜಾನ್​ಮನೆ, ಸಿದ್ದಾಪುರ, ಮುಂಡಗೋಡು, ಔರಾದ್, ಮಂಡಗದ್ದೆ, ಶ್ರೀಮಂಗಲ, ಸುಂಟಿಕೊಪ್ಪ, ಬನವಾಸಿ, ಶನಿವಾರಸಂತೆ, ಹಾಸನ, ಬಂಡೀಪುರ, ಸಕಲೇಶಪುರ, ಬೆಳಗಾವಿ, ಹುಕ್ಕೇರಿ, ಬೈಲಹೊಂಗಲ, ಧಾರವಾಡ, ಅಕ್ಕಿಆಲೂರು, ಸವಣೂರು, ಧಾರವಾಡ, ಕಮಲಾಪುರ, ಭದ್ರಾವತಿ, ಆನವಟ್ಟಿ, ಚಿಕ್ಕಮಗಳೂರಿನಲ್ಲಿ ಮಳೆಯಾಗಿದೆ.

ಕರಾವಳಿಯ ಎಲ್ಲಾ ಜಿಲ್ಲೆಗಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ, ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲೂ ಭಾರಿ ಮಳೆ ಸುರಿಯಲಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, ಬೆಳಗ್ಗೆಯಿಂದಲೇ ಜಿನುಗು ಮಳೆ ಶುರುವಾಗಿದೆ.

Latest Indian news

Popular Stories