ನಾಪತ್ತೆಯಾಗಿದ್ದ ಕಾಸರಗೋಡಿನ ನಾಲ್ವರು ಮಕ್ಕಳು ಉಡುಪಿಯಲ್ಲಿ ಪತ್ತೆ – ಪೋಷಕರಿಗೆ ಹಸ್ತಾಂತರ

ಉಡುಪಿ:ಕಾಸರಗೋಡಿನ ಅಪ್ರಾಪ್ತ ವಯಸ್ಸಿನ ನಾಲ್ವರು ಮಕ್ಕಳು ಉಡುಪಿಯಲ್ಲಿ ಪತ್ತೆಯಾಗಿದ್ದಾರೆ.

ಆಟ ಆಡಲೆಂದು ಮನೆಯಿಂದ ಹೊರಟಿದ್ದ ಬಾಲಕರು ನವೆಂಬರ್ 27 ರಂದು ನಾಪತ್ತೆಯಾಗಿದ್ದರು. ಎಲ್ಲರ ವಯಸ್ಸು 15 ವರ್ಷಕ್ಕಿಂತ ಕಡಿಮೆ ಇದ್ದು ಮನೆಗೆ ಬಾರದೆ ಇದ್ದಾಗ ಪೋಷಕರು ಕಾಸರಗೋಡಿನ ಪೊಲೀಸರಿಗೆ ದೂರು‌ ನೀಡಿದ್ದರು.

ನಂತರ ಮಂಗಳೂರು ಸೇರಿ‌ ಕರ್ನಾಟಕ ವಿವಿಧ ಠಾಣೆಯ ಪೊಲೀಸರಿಗೆ ಕಾಸರಗೋಡಿನ ಪೊಲೀಸರು ಮಾಹಿತಿ ನೀಡಿದ್ದರು. ಬಾಲಕನೊಬ್ಬನ ಮೊಬೈಲ್ ಲೊಕೇಷನ್ ಟ್ರೆಸ್ ಮಾಡಿದಾಗ ಉಡುಪಿಯಲ್ಲಿ ‌ಇರುವುದು ಪತ್ತೆಯಾಗಿದೆ‌. ನಂತರ ಅವರು ಉಡುಪಿ ಪೊಲೀಸರಿಗೆ ಮಾಹಿತಿ ನೀಡಿದ್ದು ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ನಾಲ್ವರು ಬಾಲಕರನ್ನು ವಶಕ್ಕೆ ಪಡೆದು ನ.27 ರ ರಾತ್ರಿ ಕಾಸರಗೋಡಿನ ಪೊಲೀಸರಿಗೆ ಮತ್ತು ಹೆತ್ತವರಿಗೆ ಹಸ್ತಾಂತರಿಸಿದ್ದಾರೆ.

ಗೋವಾ ಪ್ರವಾಸಕ್ಕೆ ತೆರಳುವ ಉದ್ದೇಶದಿಂದ ಮನೆ ಬಿಟ್ಟು ಬಂದಿರುವುದಾಗಿ ಬಾಲಕರು ತಿಳಿಸಿದ್ದಾರೆ. ಇದೀಗ ಮಕ್ಕಳನ್ನು ಪೋಷಕರೊಂದಿಗೆ ಕಳುಹಿಸಿ ಕೊಡಲಾಗಿದೆ.

Latest Indian news

Popular Stories