Featured StoryVijayapura

ಪತ್ನಿಗೆ ಲೋಕ ಟಿಕೆಟ್; ಕಾಶಪ್ಪನವರ ವಿಶ್ವಾಸ

ಬಾಗಲಕೋಟೆ: ಮುಂಬರುವ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಪತ್ನಿ ವೀಣಾ ಕಾಶಪ್ಪನವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಲಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ವಿಶ್ವಾಸ ವ್ಯಕ್ತ ಪಡಿಸಿದರು.

ನಗರದಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೀಣಾ ಕಾಶಪ್ಪನವರ ಚುನಾವಣೆ ಸಿದ್ದತೆ ನಡೆಸಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋತರೂ ಅವರು ಮನೆಯಲ್ಲಿ ಕುಳಿತಿಲ್ಲ. ಪಕ್ಷ ಸಂಘಟನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ಅವರ ಸ್ಪರ್ಧೆಗೆ ಅವಕಾಶ ಸಿಗಲಿದೆ ಎಂದರು.

ಜಿಲ್ಲೆಯ ನಾಯಕರ ವೈಯಕ್ತಿಕ ವಿಚಾರಗಳು ಏನೇ ಇರಲಿ. ಪಕ್ಷ ನಿರ್ಧಾರ ಮಾಡುವುದನ್ನು ಎಲ್ಲರೂ ಪಾಲಿಸಬೇಕು ಎಂದರು.
ಕಳೆದ ಬಾರಿ ಸನ್ನಿವೇಶ ಬೇರೆ ಇತ್ತು. ಇಂದಿನ ಸನ್ನಿವೇಶ ಬೇರೆ ಇದೆ. ಕಳೆದ ಬಾರಿಯೇ ಗಣನೀಯ ಪ್ರಮಾಣದಲ್ಲಿ‌ ಮತಗಳಿಸಿದ್ದರು. ಈ ಬಾರಿ ಪಕ್ಷ ಅಧಿಕಾರದಲ್ಲಿದೆ. ಐವರು ಶಾಸಕರು ಇದ್ದೇವೆ. ಸುಲಭವಾಗಿ ಕ್ಷೇತ್ರ ಕಾಂಗ್ರೆಸ್ ಪಾಲಾಗಲಿದೆ ಎಂದರು.

ಲೋಕಸಭೆ ಚುನಾವಣೆ ಫಲಿತಾಂಶ ಕಾಂಗ್ರೆಸ್ ಒಕ್ಕೂಟದ ಪರವಾಗಿ ಬರಲಿದೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದ ಅವರು ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯ ಅನೇಕ ಪ್ರಮುಖರು ಕಾಂಗ್ರೆಸ್ಸಿಗೆ ಬರಲಿದ್ದಾರೆ. ರಾಷ್ಟ್ರ ಮಟ್ಟದಲ್ಲಿಯೇ ಭಾರಿ ಬದಲಾವಣೆ ಆಗಲಿದೆ ಎಂದರು.
ರಾಜ್ಯದಲ್ಲಿ ಜೆಡಿಎಸ್ ಎಲ್ಲಿದೆ ಎಂದು ಪ್ರಶ್ನಿಸಿದ ಅವರು ಕೋಮುವಾದಿ ಪಕ್ಷದ ಜತೆ ಕೈ ಜೋಡಿಸಿದ್ದರಿಂದ ಅಲ್ಲಿ ಏನೂ ಉಳಿದಿಲ್ಲ, ಅಳಿದುಳಿದ ನಾಯಕರೂ ಕಾಂಗ್ರೆಸ್ ಆಗಮಿಸಲಿದ್ದಾರೆ ಎಂದರು.

ಜೆಡಿಎಸ್ ಜತೆ ಕೈಜೋಡಿಸಿದ ಪಕ್ಷಗಳು ಸೋತಿವೆ. ಈಗ ಮುಂದಿನ ಚುನಾವಣೆಯಲ್ಲಿ ಬಿಜೆಪಿಗರ ಸೋಲು ಗ್ಯಾರಂಟಿ ಎಂದ ಅವರು ಮುಖ್ಯಮಂತ್ರಿ ಬದಲಾವಣೆ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟ ವಿಷಯ. ಸಿಎಂ ಸ್ಥಾನಕ್ಕಾಗಿ ಪೈಪೋಟಿ ಇಲ್ಲ. ಕೆಲವರು ಸ್ವಯಂ ಘೋಷಿತ ನಾಯಕರಾಗಿದ್ದಾರೆ. ಅಂತವರಿಗೆ ಏನೂ ಮಾಡಲಾಗದು ಎಂದರು.

ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರಿಗೆ ಬುದ್ದಿ ಭ್ರಮಣೆ ಆಗಿದೆ. ಕ್ಷೇತ್ರದಲ್ಲಿ “ನಾನು ಗುಂಡಾಗಿರಿ ನಡೆಸುತ್ತಿರುವ ಬಗೆಗೆ ದಾಖಲೆ ನೀಡಲಿ. ಅವರ ಕಾಲದಲ್ಲೇ ಮಾಜಿ ಶಾಸಕರ ಮೇಲೆ ನಕಲಿ ಕೇಸ್ ದಾಖಲಿಸಿದ್ದಾರೆ” ಎಂದು ತಿರುಗೇಟು ನೀಡಿದರು.

ಅವರು ಕ್ಣೇತ್ರದಲ್ಲೇ ಇರುವುದಿಲ್ಲ. ಬರ ಬಿದ್ದರೂ ಕ್ಷೇತ್ರದಲ್ಲಿ ಕಾಣಿಸುತ್ತಿಲ್ಲ. ಅಪರೂಪವಾಗಿದ್ದಾರೆ ಎಂದು ವಾಗ್ದಾಳಿ ನಡೆಸಿ, 40% ಕಮಿಷನ್ ಹೊಡೆದು ಈಗ ಪ್ರವಾಸ ಮಾಡುತ್ತಿದ್ದಾರೆ ಲೇವಡಿ ಮಾಡಿದರು.ವೀಣಾ ಕಾಶಪ್ಪನವರ ಇತರರು ಇದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button